ಉಡುಪಿ: ಉಡುಪಿಯ ಪೇಜಾವರ ಮಠಾಧೀಶ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಈ ವರ್ಷದ ವಿಶೇಷ ವಸಂತ ಪೂಜೆಯನ್ನ ನೆರವೇರಿಸಿದ್ದಾರೆ. ಪೇಜಾವರ ಮಠಕ್ಕೆ ಒಳಪಡುವ ಮಾಂಗೋಡು ಶ್ರೀಸುಬ್ರಮಣ್ಯ ದೇವಸ್ಥಾನದ ವಸಂತ ಮಂಟಪದಲ್ಲಿ ಪಟ್ಟದ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು.
ಬೇಸಿಗೆಕಾಲ ಮುಗಿದು ಮಳೆಗಾಲ ಆರಂಭವಾಗುತ್ತಿದ್ದಂತೆ ಗಿಡಮರಗಳು ಚಿಗುರೊಡೆಯುತ್ತವೆ. ಮಳೆಗಾಲದ ವಿಶೇಷ ಹೂವುಗಳು ಅರಳುತ್ತವೆ. ಮಾವು-ಹಲಸು ಹಣ್ಣಾಗುವ ಕಾಲದಲ್ಲಿ ಎಲ್ಲವನ್ನು ದೇವರಿಗೆ ಅರ್ಪಣೆ ಮಾಡಲಾಗುತ್ತದೆ.
ಪೇಜಾವರ ಶ್ರೀಗಳು ವಸಂತ ಪೂಜೆಯಲ್ಲಿ ಎಲ್ಲವನ್ನೂ ದೇವರಿಗೆ ಸಲ್ಲಿಕೆ ಮಾಡಿದರು. ಧಾರಾಕಾರ ಸುರಿಯುವ ಮಳೆಯ ನಡುವೆ ನೂರಾರು ಭಕ್ತರು ಮಾಂಗೋಡು ದೇವಸ್ಥಾನದಲ್ಲಿ ದೇವರ ಮಹಾಪೂಜೆ ಮತ್ತು ಪೇಜಾವರ ಶ್ರೀಗಳು ನಡೆಸಿಕೊಟ್ಟ ವಸಂತ ಪೂಜೆಯನ್ನ ಕಣ್ತುಂಬಿಕೊಂಡರು.
Kshetra Samachara
18/05/2022 09:09 pm