ಕೊಲಕಾಡಿ : ಮುಲ್ಕಿ ಸಮೀಪದ ಕೊಲಕಾಡಿಯಲ್ಲಿ ಧರ್ಮದೈವಗಳ ನೇಮೋತ್ಸವ ವಿಜ್ರಂಭಣೆಯಿಂದ ನಡೆಯಿತು.
ಕಾರ್ಯಕ್ರಮಗಳ ಅಂಗವಾಗಿ ಮೇ.15 ಪ್ರಾತಃಕಾಲ ವಿಶೇಷ ಪ್ರಾರ್ಥನೆ, 8:30ರಿಂದ ಸ್ವಸ್ತಿ ಪುಣ್ಯಾಹ, ನಾಗದೇವರಿಗೆ ಕಲಶ, ದೈವಗಳಿಗೆ ಕಲಶ, ಪ್ರಾಯಶ್ಚಿತ್ತ ಹೋಮ , ಆಶ್ಲೇಷ ಬಲಿ, ಬ್ರಾಹ್ಮಣ, ವಟು--ಸುವಾಸಿನಿ ಆರಾಧನೆ ನಡೆಯಿತು.
ಸಾಯಂ 6ಗಂಟೆಯಿಂದ ಸತ್ಯದೇವತೆ ನೇಮೋತ್ಸವ, ಅನ್ನಸಂತರ್ಪಣೆ.ರಾತ್ರಿ 9 ರಿಂದ ಕರ್ಲುಟ್ಟಿ ಪಂಜುರ್ಲಿ ನೇಮೋತ್ಸವ ವಿಜ್ರಂಭಣೆಯಿಂದ ನಡೆಯಿತು.
ಯುವ ಕಾಂಗ್ರೆಸ್ ನಾಯಕ ಮಿಥುನ್ ರೈ, ಧರ್ಮದರ್ಶಿ ಡಾ. ಹರಿಕೃಷ್ಣ ಪುನರೂರು, ಲ. ವೆಂಕಟೇಶ ಹೆಬ್ಬಾರ್,ಅತಿಕಾರಿ ಬೆಟ್ಟು ಗ್ರಾಪಂ ಅಧ್ಯಕ್ಷ ಮನೋಹರ ಕೋಟ್ಯಾನ್, ಕಿಲ್ಪಾಡಿ ಗ್ರಾಪಂ ಉಪಾಧ್ಯಕ್ಷ ಗೋಪಿನಾಥ ಪಡಂಗ, ಗಂಗಾಧರ ಶೆಟ್ಟಿ ಬರ್ಕೆ ತೋಟ
ಸೇವಾರ್ಥಿಗಳಾದ ಸುಮಂಗಲಾ ಮತ್ತು ಪಿ.ರಾಘವೇಂದ್ರ ಉಪಾಧ್ಯಾಯ ಬೆಂಗಳೂರು. ವೇ.ಮೂ. ವಾದಿರಾಜ ಉಪಾಧ್ಯಾಯ, ಶಶಿಕಲಾ ಉಪಾಧ್ಯಾಯ, ಶ್ರೀವತ್ಸ ಭಟ್, ವೇಮೂ ಶ್ರೀಕಾಂತ್ ಭಟ್ ಕೊಲಕಾಡಿ, ಶ್ರೀಪತಿ ಭಟ್ ಪರೆಂಕಿಲ, ಉಪಾಧ್ಯಾಯ ಬಂಧುಗಳು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದು ಪ್ರಸಾದ ಸ್ವೀಕರಿಸಿದರು.
Kshetra Samachara
16/05/2022 09:47 am