ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಕರಾವಳಿಯ ಹಲವೆಡೆ ಇಂದು ಈದ್: ಮುಸಲ್ಮಾನ ಬಾಂಧವರಿಂದ ಸಾಮೂಹಿಕ ನಮಾಝ್

ಉಡುಪಿ: ಈ ಬಾರಿ ಕರಾವಳಿಯಲ್ಲಿ ಚಂದ್ರದರ್ಶನದ ಗೊಂದಲದಿಂದಾಗಿ ನಿನ್ನೆ ಉಡುಪಿಯ ಕೆಲವು ಭಾಗದಲ್ಲಿ ರಮಝಾನ್ ಹಬ್ಬ ಆಚರಿಸಲಾಗಿದ್ದರೆ ಇಂದು ಉಳಿದೆಡೆ ಹಬ್ಬ ಆಚರಿಸಲಾಯಿತು.

ದಕ್ಷಿಣ ಕನ್ನಡದಲ್ಲೂ ಇಂದೇ ಹಬ್ಬ ಆಚರಿಸಲಾಗುತ್ತಿದೆ. ಉಡುಪಿಯ ಹಲವು ಮಸೀದಿಗಳಲ್ಲಿ ಮತ್ತು ಮನೆಗಳಲ್ಲಿ ಹಬ್ಬದ ಸಂಭ್ರಮ ಮನೆ ಮಾಡಿತ್ತು.

ಮುಸಲ್ಮಾನ ಬಾಂಧವರು ಮಸೀದಿಗಳಿಗೆ ತೆರಳಿ ಸಾಮೂಹಿಕ ನಮಾಝ್ ನಲ್ಲಿ ಭಾಗವಹಿಸಿದರು.ಹೊಸ ಬಟ್ಟೆ ತೊಟ್ಟು ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು.ಇವತ್ತು ತಮ್ಮ ಮನೆಗಳಲ್ಲಿ ಎಲ್ಲ ಧರ್ಮೀಯರಿಗೂ ಊಟೋಪಚಾರ ಮಾಡುವ ಸಂಪ್ರದಾಯ‌ ನಡೆದುಕೊಂಡು ಬಂದಿದೆ.

Edited By : Manjunath H D
Kshetra Samachara

Kshetra Samachara

03/05/2022 03:46 pm

Cinque Terre

17.26 K

Cinque Terre

0

ಸಂಬಂಧಿತ ಸುದ್ದಿ