ಪಂಜಿನಡ್ಕ : ಸಮೀಪದ ಪಂಜಿನಡ್ಕ ಶ್ರೀ ವಿಠೋಬ ರುಕುಮಾಯಿ ಭಜನಾ ಮಂದಿರದಲ್ಲಿ ಶ್ರೀ ವಿಠೋಬ ದೇವರ ಪ್ರತಿಷ್ಠಾ ವರ್ಧಂತ್ಯುತ್ಸವದ ಅಂಗವಾಗಿ ಕೊಲಕಾಡಿ ವೇಮೂ ವಾದಿರಾಜ ಉಪಾಧ್ಯಾಯ ಮಾರ್ಗದರ್ಶನದಲ್ಲಿ ಶಿಮಂತೂರು ಪರೆಂಕಿಲ ಪುರುಷೋತ್ತಮ ಭಟ್ ಪೌರೋಹಿತ್ಯದಲ್ಲಿ ಅರ್ಖಹಾ ಭಜನಾ ಕಾರ್ಯಕ್ರಮ ನಡೆಯಿತು
ಬೆಳಿಗ್ಗೆ ಸಾಮೂಹಿಕ ಪ್ರಾರ್ಥನೆ ನಡೆದು ನಡಿಬೆಟ್ಟು ದೈವಸ್ಥಾನದ ಗುತ್ತಿನಾರ್ ದೆಪ್ಪುಣಿಗುತ್ತು ಸುಧಾಕರ ಶೆಟ್ಟಿ ,ಅತಿಕಾರಿಬೆಟ್ಟು ಗ್ರಾ ಪಂ ಅಧ್ಯಕ್ಷ ಮನೋಹರ್ ಕೋಟ್ಯಾನ್,ಉದ್ಯಮಿ ಶಾಂತಾರಾಮ ಹೆಗ್ಡೆ ತೆಂಗಾಳಿ ಪಂಜಿನಡ್ಕ,ಡಾ|ಚಂದ್ರಶೇಖರ್ ಬಲೆಪು ಮತ್ತು ಉದ್ಯಮಿ ಮಿತೇಶ್ ಬಂಗೇರ ರವರಿಂದ ಭಜನಾ ಜ್ಯೋತಿ ಪ್ರಜ್ವಲನೆ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು
ಈ ಸಂದರ್ಭ ದೆಪ್ಪುಣಿಗುತ್ತು ಸುಧಾಕರ ಶೆಟ್ಟಿ ಮಾತನಾಡಿ ಭಜನೆಯಿಂದ ಸಾನಿಧ್ಯ ವೃದ್ಧಿಯಾಗುವುದರ ಜೊತೆಗೆ ಮನಸ್ಸಿಗೆ ಶಾಂತಿ ನೆಮ್ಮದಿ ಸಾಧ್ಯ ಎಂದರು.
ಬಳಿಕ ವಿವಿಧ ಭಜನಾ ಮಂಡಳಿಗಳಿಂದ ಭಜನೆ,ರಾತ್ರಿ ಸಾಮೂಹಿಕ ಹೂವಿನ ಪೂಜೆ,ಮಹಾ ಪೂಜೆ, ಬಳಿಕ ಅನ್ನ ಸಂತರ್ಪಣೆ ನಡೆಯಿತು.
ಈ ಸಂದರ್ಭ ಭಜನಾ ಮಂದಿರದ ಅಧ್ಯಕ್ಷ ಪ್ರಭಾಕರ ಶೆಟ್ಟಿ ತೆಂಗಾಳಿ, ಸದಸ್ಯರಾದ ಹರೀಶ್ ಶೆಟ್ಟಿ, ದಿನೇಶ್ಚಂದ್ರ ಅಜಿಲ, ಶ್ರೀಮಂತ ಕಾಮತ್, ಚಂದ್ರಕಾಂತ್ ಶೆಟ್ಟಿ, ಹರೀಶ್ ಶೆಟ್ಟಿ ಪಂಜಿನಡ್ಕ, ಶಾಂತರಾಜ್ ಹೆಗ್ದೆ ಮತ್ತಿತರರು ಉಪಸ್ಥಿತರಿದ್ದರು.
Kshetra Samachara
24/04/2022 04:15 pm