ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಮೈ ಮೇಲೆ ಬೀಳುವ ಬೆಂಕಿಯ ಜ್ವಾಲೆ: ದೇವಿಯ ಕುಂಕುಮ ಹಚ್ಚಿದರೆ ನೋವು ಶಮನ!

ಮಂಗಳೂರು:ಕಟೀಲು ದುರ್ಗಾಪರಮೇಶ್ವರಿ ದೇವರ ಜಾತ್ರೋತ್ಸವ ಸಂಪನ್ನಗೊಂಡಿದೆ. ಎಂಟು ದಿನಗಳ ಕಾಲ ನಡೆದ ಜಾತ್ರೋತ್ಸವ ದೇವರ ಅವಭೃತ ಸ್ನಾನ ಮತ್ತು ಅಗ್ನಿಕೇಳಿಯ ನಂತರ ಧ್ವಜ ಕೆಳಗಿಳಿಸಿ ಮುಕ್ತಾಯವಾಗಿದೆ.

ಕೊನೆಯ ದಿನದ ವಿಶೇಷ ಅಗ್ನಿಕೇಳಿಯಲ್ಲಿ ಈ ಬಾರಿಯೂ ನೂರಾರು ಭಕ್ತರು ಭಾಗವಹಿಸಿದ್ದಾರೆ‌‌. ಕಟೀಲು ಸಮೀಪದ ಅತ್ತೂರು ಮತ್ತು ಕೊಡೆತ್ತೂರು ಗ್ರಾಮಸ್ಥರು ಪರಸ್ಪರ ಬೆಂಕಿಯ ದೀವಿಟಿಗೆಯನ್ನು ಎಸೆದು ಹರಕೆ ಸಂದಾಯ ಮಾಡಿದ್ದಾರೆ..ದೇವಸ್ಥಾನದ ಮುಂಭಾಗ ಎರಡೂ ಗ್ರಾಮದ ಜನರು ಎದುರುಬದಿರಾಗಿ ನಿಂತು ಬೆಂಕಿಯನ್ನು ಪರಸ್ಪರ ಎಸೆದು ಹರಕೆ ಸಂದಾಯ ಮಾಡಿದ್ದಾರೆ..

ಬೆಂಕಿಯ ಜ್ವಾಲೆ ಮೈ ಮೇಲೆ ಬಿದ್ದರೂ ದೇವಿಯ ಕುಂಕುಮ ಹಚ್ಚಿದರೆ ನೋವು ಶಮನ ಆಗೋದು ಈ ಅಗ್ನಿಕೇಳಿಯ ವಿಶೇಷವಾಗಿದೆ..ಈ ಅಗ್ನಿಕೇಳಿಯಲ್ಲಿ ಭಾಗವಹಿಸುವವರು ಎಂಟು ದಿನಗಳ ಕಾಲ ವೃತಾಚಾರಣೆಯಲ್ಲಿ ಇರಬೇಕು.ಈ ಅಗ್ನಿಕೇಳಿಗೆ ಎರಡು ಗ್ರಾಮದ ಜನ ದೂರದೂರಿನಲ್ಲಿ ನೆಲೆಸಿದ್ದರೂ ಜಾತ್ರೋತ್ಸವದ ದಿನ ಊರಿಗೆ ಬಂದು ದೇವಿಯ ಸೇವೆ ಸಲ್ಲಿಸೋದು ವಿಶೇಷವಾಗಿದೆ.

Edited By :
PublicNext

PublicNext

22/04/2022 12:22 pm

Cinque Terre

58.38 K

Cinque Terre

1

ಸಂಬಂಧಿತ ಸುದ್ದಿ