ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಾಪು: ಉಚ್ಚಿಲ ಶ್ರೀ ಮಹಾಲಕ್ಷ್ಮಿ ದೇವಿಗೆ 50 ಪವನ್ ತೂಕದ 'ಸ್ವರ್ಣ ಮತ್ಸ್ಯ' ಮಾಲೆ ಸಮರ್ಪಣೆ

ಕಾಪು: ತಾಲೂಕಿನ ಉಚ್ಚಿಲದ ಮೊಗವೀರ ಸಮುದಾಯದ ಶ್ರೀ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ಪುನರ್ ಪ್ರತಿಷ್ಠೆ, ಬ್ರಹ್ಮಕಲಶೋತ್ಸವ, ರಥೋತ್ಸವ ಮತ್ತು ನಾಗಮಂಡಲೋತ್ಸವ ಕಾರ್ಯಕ್ರಮಗಳು ನಡೆಯುತ್ತಿವೆ.

ಈ ಪ್ರಯುಕ್ತ ಮಂಗಳೂರಿನ ಸೌತ್ ವಾರ್ಫ್ ಯಾಂತ್ರಿಕ ಮೀನುಗಾರರ ಸಹಕಾರಿ ಸಂಘ ನಿಯಮಿತ ವತಿಯಿಂದ ಶ್ರೀ ದೇವಿಗೆ ಅಪರೂಪದ ಚಿನ್ನದ ಮೀನಿನ ಸರವನ್ನು ಸಮರ್ಪಿಸಲಾಯಿತು.

ಮತ್ಸ್ಯಾಕಾರದ ಈ ಚಿನ್ನದ ಸರ 50 ಪವನ್ (400 ಗ್ರಾಂ) ತೂಕವಿದ್ದು, ಅತ್ಯಾಕರ್ಷಕವಾಗಿದೆ. ಮೊಗವೀರರು ತಮ್ಮ ಕುಲವೃತ್ತಿಯಾದ ಮೀನುಗಾರಿಕೆಯ ಸ್ಮರಣಾರ್ಥ ಈ ಸರವನ್ನು ಜಗನ್ಮಾತೆಗೆ ಸಮರ್ಪಿಸಿದ್ದಾರೆ.

Edited By :
PublicNext

PublicNext

07/04/2022 08:16 am

Cinque Terre

34.42 K

Cinque Terre

8

ಸಂಬಂಧಿತ ಸುದ್ದಿ