ಹಳೆಯಂಗಡಿ: ಮುಲ್ಕಿ ಸಮೀಪದ ಹಳೆಯಂಗಡಿ ರಾಜಗುರು ಶ್ರೀ ವೈದ್ಯನಾಥೇಶ್ವರ ದೈವಸ್ಥಾನದಲ್ಲಿ ಶ್ರೀ ಕೋಡ್ಡಬ್ಬು ತನ್ನಿಮಾನಿಗ, ಗುಳಿಗ ಹಾಗೂ ಪರಿವಾರ ದೈವಗಳ ವರ್ಷಾವಧಿ ನೇಮೋತ್ಸವ ವಿಜೃಂಭಣೆಯಿಂದ ನಡೆಯಿತು.
ನೇಮೋತ್ಸವದ ಅಂಗವಾಗಿ ಶುಕ್ರವಾರ ಬೆಳಿಗ್ಗೆ ವಿಶೇಷ ಪ್ರಾರ್ಥನೆ ಹಾಗೂ ಚಪ್ಪರ ಮುಹೂರ್ತ, ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಿತು.
ಸಂಜೆ 3 ಗಂಟೆಗೆ ಚಪ್ಪರ ಏರುವ ಕಾರ್ಯಕ್ರಮ,ರಾತ್ರಿ 7ಗಂಟೆಗೆ ಭಂಡಾರ ಏರುವ ಮುಖಾಂತರ ವರ್ತೆ ಪಂಜುರ್ಲಿ ದೈವಗಳಿಗೆ ನೇಮೋತ್ಸವ, ಶ್ರೀ ಕೋಡ್ದಬ್ಬು ತನ್ನಿಮಾನಿಗ ದೈವಗಳ ನೇಮೋತ್ಸವ ವಿಜ್ರಂಭಣೆಯಿಂದ ನಡೆಯಿತು.
ಈ ಸಂದರ್ಭ ದೈವಸ್ಥಾನ ಸಮಿತಿಯ ಅಧ್ಯಕ್ಷರು ಮತ್ತು ಪದಾಧಿಕಾರಿಗಳು, ಗ್ರಾಮಸ್ಥರು ಉಪಸ್ಥಿತರಿದ್ದರು.ಶನಿವಾರ ಸಂಜೆ ಶ್ರೀ ಗುಳಿಗ ದೈವದ ನೇಮೋತ್ಸವ, ಶ್ರೀ ಧೂಮಾವತಿ ಮತ್ತು ಬಂಟ ದೈವಗಳ ನೇಮೋತ್ಸವ ನಡೆಯಲಿದೆ.
Kshetra Samachara
02/04/2022 10:28 am