ಪುತ್ತೂರು: ಇತಿಹಾಸ ಪ್ರಸಿದ್ಧ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ನಡೆಯುವ ಜಾತ್ರೋತ್ಸವದ ಪ್ರಯುಕ್ತ ಎಪ್ರಿಲ್ 1 ರಂದು ಕ್ಷೇತ್ರದಲ್ಲಿ ಗೊನೆ ಮುಹೂರ್ತ ಕಾರ್ಯಕ್ರಮ ನಡೆಯಿತು.
ಕ್ಷೇತ್ರದ ಮುಖ್ಯ ಅರ್ಚಕ ವಿ.ಎಸ್ ಭಟ್ ನೇತೃತ್ವದಲ್ಲಿ ನಡೆದ ಧಾರ್ಮಿಕ ವಿಧಿ-ವಿಧಾನಗಳಲ್ಲಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವಪ್ರಸಾದ್ ಮುಳಿಯ ಸೇರಿದಂತೆ ಹಲವು ಗಣ್ಯರು ಹಾಗೂ ಭಕ್ತರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಎಪ್ರಿಲ್ 10 ರಂದು ಜಾತ್ರೋತ್ಸವದ ಧ್ವಜಾರೋಹಣ ನಡೆಯಲಿದ್ದು, ಎಪ್ರಿಲ್ 16 ರಂದು ಉಳ್ಳಾಲ್ತಿ ದೈವದ ಭೇಟಿ ಮತ್ತು 17 ರಂದು ಮಹಾಲಿಂಗೇಶ್ವರ ಸ್ವಾಮಿಯ ಬ್ರಹ್ಮರಥೋತ್ಸವ ಮತ್ತು ಸಿಡಿಮದ್ದು ಪ್ರದರ್ಶನ ಮತ್ತು 18 ರಂದು ದೇವರ ಅವಭೃತ ಸ್ನಾನ ನಡೆಯಲಿದೆ.
Kshetra Samachara
01/04/2022 04:41 pm