ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಕಾಪುವಿನ ಸುಗ್ಗಿ ಮಾರಿ ಜಾತ್ರೆಗೆ ಚಾಲನೆ: ಮಾರಿಗುಡಿಯತ್ತ ಭಕ್ತರ ದಂಡು...

ಕಾಪು: ಉಡುಪಿ ಜಿಲ್ಲೆಯ ಕಾಪುವಿನ‌ ಪ್ರಸಿದ್ಧ ಸುಗ್ಗಿ ಮಾರಿ ಜಾತ್ರೆಗೆ ಇಂದು ಚಾಲನೆ ಸಿಕ್ಕಿದೆ. ಹಳೆ ಮಾರಿಗುಡಿ, ಹೊಸ ಮಾರಿಗುಡಿ ಮತ್ತು ಮೂರನೇ ಮಾರಿಗುಡಿಯ ಮಾರಿಯಮ್ಮ ದೇವಿಯ ಸನ್ನಿಧಿಯಲ್ಲಿ ವರ್ಷಂಪ್ರತಿ ನಡೆಯುವ ಈ ಕಾಲಾವಧಿ ಸುಗ್ಗಿ ಮಾರಿ ಪೂಜೆಗೆ, ಭಕ್ತಾದಿಗಳು ಬೆಳಿಗ್ಗಿನಿಂದಲೇ ಆಗಮಿಸುತ್ತಿದ್ದಾರೆ. ತುಳುನಾಡಿನ ಸಪ್ತ ಜಾತ್ರೆಗಳಲ್ಲಿ ಒಂದೆಂಬ ಹೆಗ್ಗಳಿಕೆ ಕಾಪುವಿನ ಸುಗ್ಗಿ ಮಾರಿ ಪೂಜೆಗಿದೆ. ಈ ಜಾತ್ರೆಗೆ ಬೇರೆ ರಾಜ್ಯಗಳಿಂದಲೂ ಭಕ್ತರು ಆಗಮಿಸಿ ಇಷ್ಟಾರ್ಥ ಈಡೇರಿಕೆಗೆ ಹರಕೆ ರೂಪದಲ್ಲಿ ನಾನಾ ಸೇವೆಗಳನ್ನು ಸಲ್ಲಿಸುತ್ತಾರೆ.

ಇನ್ನು ಈ ಬಾರಿ ವಿಶೇಷ ಕಾರಣಕ್ಕೆ ಸುಗ್ಗಿ ಮಾರಿ ಗಮನ ಸೆಳೆದಿದೆ.ಅದು ಜಾತ್ರೆ ಸಂದರ್ಭ ಅನ್ಯಧರ್ಮೀಯರಿಗೆ ವ್ಯಾಪಾರಕ್ಕೆ ಅವಕಾಶ ನಿರಾಕರಿಸಿರುವುದು. ವರ್ಷಂಪ್ರತಿ ಇಲ್ಲಿ ಜಾತಿಭೇದ ಮಾಡದೆ ಮುಸಲ್ಮಾನರಿಗೂ ಈ ಬೃಹತ್ ಮಾರಿ ಜಾತ್ರೆಯಲ್ಲಿ ಸ್ಟಾಲ್ ಹಾಕಲು ಅನುಮತಿ‌ ಇತ್ತು. ಆದ್ರೆ ಈ ಬಾರಿ ಹಿಜಾಬ್ ತೀರ್ಪಿನ ಹಿನ್ನೆಲೆಯಲ್ಲಿ ಮುಸ್ಲಿಂ ಸಂಘಟನೆಗಳು ಕರ್ನಾಟಕ ಬಂದ್ ಗೆ ಕರೆ ನೀಡಿದ್ದು ಹಿಂದೂ ಸಂಘಟನೆಗಳನ್ನು ಕೆರಳಿಸಿತ್ತು. ಇದೇ ಕಾರಣಕ್ಕೆ ಹಿಂದೂ ಸಂಘಟನೆಗಳು ,ಮುಸಲ್ಮಾನರಿಗೆ ವ್ಯಾಪಾರಕ್ಕೆ ಅವಕಾಶ ನೀಡದಂತೆ ಮನವಿ ಮಾಡಿದ್ದು ,ದೇವಸ್ಥಾನದ ಆಡಳಿತ ಮಂಡಳಿ ಮುಸಲ್ಮಾನರಿಗೆ ಅವಕಾಶ ನೀಡಿಲ್ಲ.

ಇಂದು ಮತ್ತು ನಾಳೆ ನಡೆಯುವ ಕಾಪು ಮಾರಿ ಉತ್ಸವ ತಡ ರಾತ್ರಿ ಕಳೆಗಟ್ಟಲಿದೆ.ರಾತ್ರಿಯಿಂದ ನಾಳೆ ಮಧ್ಯಾಹ್ನದವರೆಗೆ ಸಹಸ್ರಾರು ಸಂಖ್ಯೆಯಲ್ಲಿ ಕೋಳಿ ಮತ್ತು ಆಡುಗಳನ್ನು ಹರಕೆ ರೂಪದಲ್ಲಿ ದೇವಿಗೆ ಸಮರ್ಪಣೆ ಮಾಡಲಾಗುತ್ತದೆ.

-ರಹೀಂ ಉಜಿರೆ, ಪಬ್ಲಿಕ್ ನೆಕ್ಸ್ಟ್, ಉಡುಪಿ

Edited By : Shivu K
Kshetra Samachara

Kshetra Samachara

22/03/2022 04:24 pm

Cinque Terre

7.55 K

Cinque Terre

3

ಸಂಬಂಧಿತ ಸುದ್ದಿ