ಕಟಪಾಡಿ: ಕೊರೊನಾ ನಿರ್ಬಂಧ ಸಡಿಲಗೊಳ್ಳುತ್ತಲೇ ಜಿಲ್ಲೆಯಾದ್ಯಂತ ನೇಮೋತ್ಸವ ,ಕೋಲಗಳು ನಡೆಯುತ್ತಿವೆ. ಕಟಪಾಡಿ ಶಂಕರಪುರ ಶಿವಾನಂದನಗರ ಶ್ರೀ ಬಬ್ಬುಸ್ವಾಮಿ ದೇವಸ್ಥಾನದ ವಾರ್ಷಿಕ ನೇಮೋತ್ಸವ ಬಹಳ ವಿಶೇಷ. ಈ ಪ್ರಯುಕ್ತ ಬಬ್ಬುಸ್ವಾಮಿ ಪರಿವಾರ ದೈವಗಳ ನೇಮೋತ್ಸವ ಸಂಪನ್ನಗೊಂಡಿತು.
ಈ ಸಂದರ್ಭ ಕಾರ್ಣಿಕದ ದೈವವಾದ ಸ್ವಾಮಿ ಕೊರಗಜ್ಜ ನೇಮೋತ್ಸವ ನಡೆಯಿತು. ಸಾವಿರಾರು ಭಕ್ತರು ಸ್ವಾಮಿ ಕೊರಗಜ್ಜನ ಪ್ರಸಾದ ಸ್ವೀಕರಿಸಿ ದೇವರ ಕೃಪೆಗೆ ಪಾತ್ರರಾದರು. ಗುರಿಕಾರರು, ಗ್ರಾಮಸ್ಥರು ಮತ್ತು ನೂರಾರು ಆಸ್ತಿಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
Kshetra Samachara
09/03/2022 10:30 pm