ಬಾರಕೂರು: ತುಳುನಾಡ ರಾಜಧಾನಿಯಾಗಿದ್ದ ಬಾರಕೂರು ದೇವಾಲಯಗಳ ನಗರವೂ ಹೌದು. ಇಲ್ಲಿಯ ಪ್ರತೀ ರಸ್ತೆ , ಕಟ್ಟಡ ಒಂದೊಂದು ಇತಿಹಾಸ ಹೊಂದಿವೆ.
ಇಂತಹ ಬಾರಕೂರಿನ ಚೌಳಿಕೇರಿ ಹಾಡಿಯಲ್ಲಿ ಪೂಜೆ- ಪುನಸ್ಕಾರ ಕಾಣದೆ ಅನಾಥವಾಗಿ, ಅವಶೇಷ ಮಾತ್ರ ಇದ್ದ ಶ್ರೀ ಗೌರೀಶ್ವರ ಮತ್ತು ಶ್ರೀ ಸಹಸ್ರ ವಿಷ್ಣು ದೇವಸ್ಥಾನ ಇದೆ. ಇದೀಗ ಈ ದೇವಸ್ಥಾನಕ್ಕೆ ಹೊಸ ಕಳೆ ಬಂದು ಪೂಜೆ, ಭಜನೆ ಪ್ರಾರಂಭಗೊಂಡಿದೆ.
ಸಮಾನ ಮನಸ್ಕ ಯುವತಂಡ ಯುವ ಬ್ರಿಗೇಡ್ ಯುವಕರು, ಈ ದೇವಸ್ಥಾನದ ಸುತ್ತಮುತ್ತಲಿನ ಗಿಡಗಂಟಿಗಳನ್ನು ಕಡಿದು ಸ್ವಚ್ಛ ಗೊಳಿಸಿ ದೇವಸ್ಥಾನಕ್ಕೆ ಹೊಸ ರೂಪ ಕೊಟ್ಟಿದ್ದಾರೆ.
ಸ್ಥಳೀಯ ಭಜನಾ ತಂಡದಿಂದ ಭಜನೆ, ಚೆಂಡೆ ನಿನಾದ ಕೇಳಿಸತೊಡಗಿದೆ. ದೇವಸ್ಥಾನಕ್ಕೆ ಹೂವಿನ ಅಲಂಕಾರ ಮಾಡಿ ನೂರಾರು ಭಕ್ತರು ಆಗಮಿಸಿ ಪೂಜೆ, ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ.
ಬಾರಕೂರು ಗ್ರಾಪಂ ಅಧ್ಯಕ್ಷ ಶಾಂತಾರಾಮ ಶೆಟ್ಟಿ ಸಹಿತ ಅನೇಕ ಗಣ್ಯರು ಶಿಥಿಲಾವಸ್ಥೆಯಲ್ಲಿರುವ ದೇವಸ್ಥಾನಕ್ಕೆ ಬಂದು ಯುವಕರ ಸಂಕಲ್ಪಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ ಜೀರ್ಣೋದ್ಧಾರದ ಯೋಜನೆಗೆ ಬೆಂಬಲ ಸೂಚಿಸಿದ್ದಾರೆ.
ಸುತ್ತಲೂ ಬೃಹತ್ ಮರಗಳ ನಡುವೆ ಇರುವ ದೇವಸ್ಥಾನಕ್ಕೆ ಭಕ್ತರು, ದಾನಿಗಳು ನೆರವು ನೀಡಿ ಇನ್ನಷ್ಟು ಚೈತನ್ಯ ನೀಡುವ ಕೈಂಕರ್ಯ ಮಾಡಬೇಕಾಗಿದೆ ಅಂತಾರೆ ಸ್ಥಳೀಯರು.
Kshetra Samachara
04/03/2022 08:00 pm