ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಮಟಪಾಡಿಯಲ್ಲಿ ಶ್ರೀರಾಮ ತಾರಕ ಹೋಮ, ಏಕಾಹ ಭಜನಾ ಮಂಗಲೋತ್ಸವ ಸಂಪನ್ನ

ಬ್ರಹ್ಮಾವರ: ಶ್ರೀರಾಮಚಂದ್ರ ಭಜನಾ ಮಂದಿರ ಮಟಪಾಡಿ ಬ್ರಹ್ಮಾವರ ವತಿಯಿಂದ ಏಕಾಹ ಭಜನಾ ಮಂಗಲೋತ್ಸವದ ಸಮಾರೋಪ ಜರುಗಿತು.

ಏಕಾಹ ಭಜನಾ ಮಂಗಲೋತ್ಸವದ ಪ್ರಯುಕ್ತ ಶ್ರೀರಾಮ ತಾರಕ ಹೋಮ ಮತ್ತು ಮಧ್ಯಾಹ್ನ ಮಹಾ ಅನ್ನಸಂತರ್ಪಣೆ ನಡೆಯಿತು. ಮಧ್ಯಾಹ್ನದಿಂದ ಬೆಳಗ್ಗಿನವರೆಗೆ ಭಜನಾ ಮಂಗಲೋತ್ಸವ ನಡೆಯಿತು. ಒಟ್ಟು 10 ತಂಡಗಳು ಭಜನಾ ಮಂಗಲೋತ್ಸವದಲ್ಲಿ ಪಾಲ್ಗೊಂಡಿದ್ದು ಅದರಲ್ಲಿ ಎರಡು ಮಹಿಳಾ ತಂಡಗಳು ಕೂಡ ಭಾಗವಹಿಸಿದ್ದವು. ವಿಶೇಷವಾಗಿ ಬ್ಯಾಂಡ್‌ ವಾದ್ಯಕ್ಕೆ ಭಜನೆ ಕುಣಿತ ನಡೆಯಿತು. ಈ ಕಾರ್ಯಕ್ರಮದಲ್ಲಿ ಶ್ರೀರಾಮಚಂದ್ರ ಭಜನಾ ಮಂದಿರ ಮಟಪಾಡಿ ಇದರ ಪದಾಧಿಕಾರಿಗಳು ಹಾಗೂ ಸ್ಥಳೀಯ ಗ್ರಾಮಸ್ಥರು ಸಾಕಷ್ಟು ಸಂಖ್ಯೆಯಲ್ಲಿ ಭಾಗವಹಿಸಿದ್ದರು.

Edited By : Shivu K
Kshetra Samachara

Kshetra Samachara

03/03/2022 06:02 pm

Cinque Terre

4.48 K

Cinque Terre

0

ಸಂಬಂಧಿತ ಸುದ್ದಿ