ಮಂಗಳೂರು: ಮಂಗಳೂರು ಹೊರವಲಯದ ಇರುವೈಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ವಾರ್ಷಿಕ ಜಾತ್ರೆ ವಿಜೃಂಭಣೆಯಿಂದ ನಡೆಯಿತು.
ಈ ಸಂದರ್ಭ ಸಾವಿರದ ಒಂದು ಅಡಿಕೆ ಹಾಳೆಗಳಿಂದ ತಯಾರಿಸಲಾದ ಅಣಿಯಿಂದ ಶೃಂಗರಿಸಲ್ಪಟ್ಟ ಮೂಡ್ಲಾಯಿ ದೈವ ಹಾಗೂ ಶ್ರೀ ದೇವರ ಭೇಟಿ ನಡೆಯಿತು. ಈ ನಯನ ಮನೋಹರ ದೃಶ್ಯವನ್ನು ಭಕ್ತರು ಕಣ್ತುಂಬಿಸಿಕೊಂಡರು.
Kshetra Samachara
23/02/2022 03:37 pm