ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಾರ್ಕಳ: ಅತ್ತೂರು ಚರ್ಚ್ ಜಾತ್ರಾ ವೈಭವ; ಸಾಮರಸ್ಯದ ಬದುಕಿಗೆ ಇಲ್ಲಿ ಪ್ರೇರೇಪಣೆ

ವರದಿ: ರಹೀಂ ಉಜಿರೆ

ಕಾರ್ಕಳ: ಕಾರ್ಕಳದ ಅತ್ತೂರು ಸೈಂಟ್ ಲಾರೆನ್ಸ್ ಚರ್ಚ್ ನ ವಾರ್ಷಿಕ ಜಾತ್ರಾ ಮಹೋತ್ಸವ ಪ್ರಾರಂಭಗೊಂಡಿದೆ. ಭಾನುವಾರದಿಂದ ಮೊದಲ್ಗೊಂಡು ಗುರುವಾರದ ತನಕ ಈ ಮಹೋತ್ಸವ ನಡೆಯಲಿದೆ.

ಅತ್ತೂರು ಜಾತ್ರೆ ಪ್ರಾರಂಭಗೊಂಡಿತೆಂದರೆ ಕಾರ್ಕಳದಲ್ಲಿ ರಾತ್ರಿಯಾಗುವುದಿಲ್ಲ ಎಂದೇ ಜನ ನಂಬುತ್ತಾರೆ.

ಜಾತಿ- ಧರ್ಮ ಮೀರಿದ ಅತ್ತೂರು ಚರ್ಚ್, ಈ ಭಾಗದ ಕ್ರಿಶ್ಚಿಯನ್, ಹಿಂದೂ, ಮುಸ್ಲಿಮರನ್ನು ಸಾಮರಸ್ಯದ ಬದುಕಿಗೆ ಪ್ರೇರೇಪಿಸುತ್ತದೆ.

ಕಾರ್ಕಳದ ಸಾಂತ್ ಮಾರಿ ಎಂದೇ ಪ್ರಸಿದ್ಧಿಯ ಅತ್ತೂರು ಜಾತ್ರೆ ದಕ್ಷಿಣ ಭಾರತದಲ್ಲೇ ಭಾವೈಕ್ಯದ ಅಗ್ರ ಧಾರ್ಮಿಕ ಕ್ಷೇತ್ರ. ಸಂತ ಲಾರೆನ್ಸ್ ಚರ್ಚ್ ವಿದ್ಯುದ್ದೀಪಗಳಿಂದ ಕಂಗೊಳಿಸುತ್ತಿದ್ದು, ರಾಜ್ಯ- ಹೊರರಾಜ್ಯಗಳ ಭಕ್ತರ ದಂಡೇ ಹರಿದು ಬರುತ್ತಿದೆ.

ಮುಖ್ಯವಾಗಿ ಹಿಂದೂ‌- ಮುಸ್ಲಿಮ್ ಬಾಂಧವರು ಮೊಂಬತ್ತಿ ಬೆಳಗಿ ಇಷ್ಟಾರ್ಥ ಸಿದ್ಧಿಗಾಗಿ ಪ್ರಾರ್ಥಿಸುವುದು ಇಲ್ಲಿನ ವಿಶೇಷತೆ. ಕೋವಿಡ್ ಕಾರಣಕ್ಕೆ ಮುಂದೂಡಲ್ಪಟ್ಟಿದ್ದ ಅತ್ತೂರು ಜಾತ್ರೆ ಈ ವರ್ಷ ಜನವರಿ ಬದಲು ಫೆಬ್ರವರಿಯಲ್ಲಿ ಬಂದಿದೆ. ಕರಾವಳಿ ಸಹಿತ ರಾಜ್ಯದೆಲ್ಲೆಡೆ ಕೋಮು ಸಾಮರಸ್ಯಕ್ಕೆ ಭಂಗ ತರುವ ಹೊತ್ತಲ್ಲೇ ಈ ಉತ್ಸವ ಬಂದಿದ್ದು, ಸರ್ವ ಧರ್ಮ ಸಮನ್ವಯತೆ ಎಲ್ಲೆಡೆ ಪಸರಿಸಲಿ ಎಂದು ಹಾರೈಸೋಣ.

Edited By : Shivu K
Kshetra Samachara

Kshetra Samachara

23/02/2022 08:53 am

Cinque Terre

16.75 K

Cinque Terre

0

ಸಂಬಂಧಿತ ಸುದ್ದಿ