ಪಾಜಕ: ಪಾಜಕ ಕ್ಷೇತ್ರದಲ್ಲಿ ಕಾಣಿಯೂರು ಮಠಾಧೀಶರಾದ ಶ್ರೀ ವಿದ್ಯಾವಲ್ಲಭ ತೀರ್ಥ ಶ್ರೀಪಾದರ ಉಪಸ್ಥಿತಯಲ್ಲಿ ಅನಂತಾಸನ ಹಾಗೂ ಮಧ್ವಾಚಾರ್ಯರ ಉತ್ಸವ ಮೂರ್ತಿಯನ್ನು ರಥದಲ್ಲಿಟ್ಟು ವೈಭವದಿಂದ ಉತ್ಸವ ನಡೆಯಿತು.
ಅನಂತಾಸನ ದೇವರ ಸನ್ನಿಧಿಯಲ್ಲಿ ಪ್ರಾರ್ಥಿಸಿ ಉತ್ಸವ ಮೂರ್ತಿಯನ್ನು ಪಲ್ಲಕಿಯಲ್ಲಿಟ್ಟು ಬಿರುದಾವಳಿ,ವಾದ್ಯ, ಚೆಂಡೆ,ಕೀಲುಕುದುರೆ,ಬ್ಯಾಂಡ್, ಕೊಂಬು ಕಹಳೆ ನಾಸಿಕ್ ಬ್ಯಾಂಡ್ ಗಳೊಂದಿಗೆ ಉತ್ಸವ ಆರಂಭವಾಯಿತು. ಸುಮಾರು 1 ಕಿ.ಮೀ ದೂರದಲ್ಲಿ ಕುಂಜಾರುಗಿರಿಯ ತಪ್ಪಲಿನಲ್ಲಿರುವ ಮಧ್ವಾಚಾರ್ಯರು ಬಾಲಕನಾಗಿದ್ದಾಗ ಮಣಿಮಂತ ದೈತ್ಯನನ್ನು ಸಂಹಾರ ಮಾಡಿದ ಸ್ಥಳಕ್ಕೆ ಬಂದು ಪೂಜೆ ಮಾಡಿ ಬಳಿಕ ರಥ ಪಾಜಕಕ್ಷೇತ್ರಕ್ಕೆ ಹಿಂತಿರುಗಿತು.
ಪಾಜಕಕ್ಷೇತ್ರದ ಆಡಳಿತ ಸೂತ್ರಧಾರ ಕಾಣಿಯೂರು ಮಠಾಧೀಶರು ಉಪಸ್ಥಿತರಿದ್ದು ಅಪಾರ ಸಂಖ್ಯೆಯಲ್ಲಿ ಭಕ್ತಾಧಿಗಳು ಪಾಲ್ಗೊಂಡರು. ಉತ್ಸವದ ನಂತರ ಮಧ್ವಾಚಾರ್ಯರ ಸನ್ನಿಧಿಯಲ್ಲಿ ಅಷ್ಟಾವಧಾನ ಸೇವೆ ನಡೆದು, ಕಾಣಿಯೂರು ಶ್ರೀಪಾದರು ಮಧ್ವಾಚಾರ್ಯರು ಮನುಕುಲದ ಉದ್ಧಾರಕ್ಕಾಗಿ ನೀಡಿದ ಸಂದೇಶಗಳನ್ನು ತಿಳಿಸಿ ಅನುಗ್ರಹ ಮಂತ್ರಾಕ್ಷತೆ ನೀಡಿದರು.
Kshetra Samachara
12/02/2022 11:56 am