ಮುಲ್ಕಿ: ಮುಲ್ಕಿಯ ಇತಿಹಾಸ ಪ್ರಸಿದ್ಧ ಒಳಲಂಕೆ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಮಾಘ ಶುದ್ಧ ನವಮಿ ಮಧ್ವನವಮಿ ಸಂಭ್ರಮದಿಂದ ನಡೆಯಿತು
ದೇವಸ್ಥಾನದಲ್ಲಿ ಪ್ರಾತಃಕಾಲ ವಿಶೇಷ ಪ್ರಾರ್ಥನೆ , 10.30ಕ್ಕೆ ಶ್ರೀ ದೇವರಿಗೆ ಅಭಿಷೇಕ ಹಾಗೂ ಮಹಾಪೂಜೆ , ಮಧ್ಯಾಹ್ನ ಮಹಾಮಂಗಳಾರತಿ ನಡೆಯಿತು.
ಸಂಜೆ 5ಗಂಟೆಗೆ ಶ್ರೀ ದೇವರ ಪೇಟೆ ಸವಾರಿ, ಹಗಲು ಉತ್ಸವ, ಮಹಾನೈವೇದ್ಯ, ಮಂಗಳಾರತಿ ದರ್ಶನ ಸೇವೆ, ರಾತ್ರಿ ಪೂಜೆ, ದೀಪಾರಾಧನೆ, ರಥೋತ್ಸವ, ನಿತ್ಯೋತ್ಸವ, ಭಂಡಿ ಹನುಮಾನೋತ್ಸವ, ವಸಂತ ಪೂಜೆ ಬಳಿಕ ಸಮಾರಾಧನೆ ನಡೆಯಿತು.
ಈ ಸಂದರ್ಭ ದೇವಸ್ಥಾನದ ಅರ್ಚಕರು ಸಿಬ್ಬಂದಿ ವರ್ಗ, ಭಕ್ತ ವೃಂದ, ಉಪಸ್ಥಿತರಿದ್ದರು
Kshetra Samachara
11/02/2022 01:46 pm