ಮಂಗಳೂರು: ನಗರದ ಮರೋಳಿ ಶ್ರೀ ಸೂರ್ಯನಾರಾಯಣ ದೇವಸ್ಥಾನದಲ್ಲಿ ವಾರ್ಷಿಕ ಜಾತ್ರ ಮಹೋತ್ಸವ ಹಾಗೂ ರಥೋತ್ಸವ ಅದ್ದೂರಿಯಾಗಿ ನಡೆಯಿತು.
5 ದಿನಗಳ ಕಾಲ ನಡೆದು ರಥೋತ್ಸವ ಬಳಿಕ ಸಂಪನ್ನಗೊಂಡಿತು.ರಥೋತ್ಸವ ಸಂದರ್ಭದಲ್ಲಿ ಚೆಂಡೆ ಸುತ್ತು, ಬಲಿ ಸೇವೆ, ನೃತ್ಯ ಬಲಿ, ಬಟ್ಲ ಕಾಣಿಕೆ ಹಾಗೂ ವಿಶೇಷ ಮಹಾಪೂಜೆ ಶ್ರೀ ಭೂತ ಬಲಿ ಶಯನ ನಡೆಯಿತು. ವಾರ್ಷಿಕ ಉತ್ಸವದಲ್ಲಿ ಸಾವಿರಾರು ಮಂದಿ ಭಕ್ತರು ಭಾಗವಹಿಸಿದ್ದರು. ರಥವನ್ನು ಎಳೆದ ಸೂರ್ಯನಾರಾಯಣ ಸ್ವಾಮಿಯ ಕೃಪೆಗೆ ಪಾತ್ರರಾದರು. ಜಾತ್ರ ಮಹೋತ್ಸವದ ಪ್ರಯುಕ್ತ ದೇವಸ್ಥಾನವನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು. ರಥೋತ್ಸವ ಸಂದರ್ಭ ಸುಡುಮದ್ದು ಪ್ರದರ್ಶನ ಭಕ್ತರನ್ನು ಆಕರ್ಷಿಸಿತ್ತು.
Kshetra Samachara
09/02/2022 09:59 pm