ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೈಕಂಬ:ಹಿಜಾಬ್ ನಿರಾಕರಣೆ ಪ್ರಶ್ನಿಸಿ ಬೃಹತ್ ಪ್ರತಿಭಟನಾ ಸಭೆ

ಬಜಪೆ: ಮುಸ್ಲಿಂ ವಿದ್ಯಾರ್ಥಿನಿಯರ ಹಿಜಾಬ್ ನಿರಾಕರಣೆ ಪ್ರಶ್ನಿಸಿ ಗುರುಪುರ ಕೈಕಂಬದಲ್ಲಿ `ಸಂವಿಧಾನ ಸಂರಕ್ಷಣಾ ಮಹಿಳಾ ಸಮಿತಿ'ಯ ವತಿಯಿಂದ ಇಂದು ಬೃಹತ್ ಪ್ರತಿಭಟನಾ ಸಭೆ ನಡೆಸಿತು.

ಸಮಿತಿಯ ಅಧ್ಯಕ್ಷೆ ಶೈನಾಝ್ ಅವರು ಸಭೆಯ ಅಧ್ಯಕ್ಷತೆ ವಹಿಸಿದ್ದರು.ಪ್ರತಿಭಟನೆಯಲ್ಲಿ ಸಂಪೂರ್ಣ ವಸ್ತ್ರಧಾರಣೆ ನನ್ನ ಹಕ್ಕು,ಮುಸ್ಲಿಂ ವಿದ್ಯಾರ್ಥಿನಿಯರ ಹಿಜಾಬ್ ನಿರಾಕರಣೆ ಎಂದರೆ, ಸಂವಿಧಾನ ಮತ್ತು ಪ್ರಜಾಪ್ರಭುತ್ವದ ನಿರಾಕರಣೆಯಾಗಿದೆ,ಮಹಾನ್ ಸಂವಿಧಾನ, ಕಾನೂನುಗಳು ಅಸ್ವಿತ್ವದಲ್ಲಿರುವಾಗ ಅದನ್ನು ಉಲ್ಲಂಘಿಸಲು ಯಾವುದೇ ಆಡಳಿತ ಕಾನೂನಿನಿಗೆ ಹಕ್ಕಿಲ್ಲ ಎಂಬ ಘೋಷಣೆಗಳು ಕೇಳಿ ಬಂದವು.

ಪ್ರತಿಭಟನಾ ಸಭೆಯಲ್ಲಿ ನೂರಾರು ಮುಸ್ಲಿಂ ಮಹಿಳೆಯರು, ವಿದ್ಯಾರ್ಥಿನಿಯರು, ಮಕ್ಕಳು ಹಾಗೂ ಸಮಿತಿ ಬೆಂಬಲಕ್ಕೆ ನಿಂತಿರುವ ಮುಸ್ಲಿಂ ಪುರುಷರು ಪಾಲ್ಗೊಂಡಿದ್ದರು.

Edited By :
Kshetra Samachara

Kshetra Samachara

07/02/2022 08:27 pm

Cinque Terre

4.85 K

Cinque Terre

0

ಸಂಬಂಧಿತ ಸುದ್ದಿ