ಮುಲ್ಕಿ: ಪಡುಪಣಂಬೂರು ಧರ್ಮದೈವ ಶ್ರೀ ಜಾರಂದಾಯ ಮತ್ತು ಬಂಟ ದೈವ ವರ್ಷಾವಧಿ ನೇಮೋತ್ಸವ ವಿಜೃಂಭಣೆಯಿಂದ ನಡೆಯಿತು.
ಭಾನುವಾರ ಪ್ರಾತಃಕಾಲ ವೇದವ್ಯಾಸ ತಂತ್ರಿ ನೇತೃತ್ವದಲ್ಲಿ ಸಾಮೂಹಿಕ ಪ್ರಾರ್ಥನೆ, ಸ್ವಸ್ತಿ ಪುಣ್ಯಾಹ ಗಣಹೋಮ, ನವ ಕಲಶಾಭಿಷೇಕ ,
ಪೂರ್ವಾಹ್ನ 10.30ಕ್ಕೆ ಸಾರ್ವಜನಿಕ ಪನಿವಾರ ಸೇವೆ, 12 ಗಂಟೆಗೆ ಮಹಾಪೂಜೆ, ಪ್ರಸಾದ ವಿತರಣೆ ನಡೆಯಿತು.
ಮುಕ್ಕ ಶ್ರೀನಿವಾಸ್ ಗ್ರೂಪ್ಸ್ ಡೀನ್ ಉದಯಕುಮಾರ್ ಎಂ.ಡಿ. ಬೆಳಿಗ್ಗೆ 11ಕ್ಕೆ ಭಜನಾ ಜ್ಯೋತಿ ಬೆಳಗಿಸಿ, ಭಜನೋತ್ಸವಕ್ಕೆ ಚಾಲನೆ ನೀಡಿದರು.
ಬಳಿಕ ಅನಂತಪದ್ಮನಾಭ ಭಟ್ ಮತ್ತು ಬಳಗ ಕುಲ್ಲಂಗಾಲ್ ಅವರಿಂದ ಭಜನೆ ನಡೆಯಿತು.
ಅಪರಾಹ್ನ 3 ಗಂಟೆಗೆ ಭಂಡಾರ ಇಳಿಯುವ ಮುಖಾಂತರ ನೇಮೋತ್ಸವ ಆರಂಭಗೊಂಡಿತು. ಬಳಿಕ ಶ್ರೀ ಜಾರಂದಾಯ ಮತ್ತು ಬಂಟ ದೈವಗಳ ವರ್ಷಾವಧಿ ನೇಮೋತ್ಸವ ಜರುಗಿತು.
ಮೂಲ್ಕಿ ಸೀಮೆ ಅರಸರಾದ ದುಗ್ಗಣ್ಣ ಸಾವಂತರು, ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ದಯಾನಂದ ಕತ್ತಲ್ ಸಾರ್, ಮುಂಬಯಿ ಬಂಟರ ಸಂಘದ ಮಾಜಿ ಅಧ್ಯಕ್ಷ ಭುಜಂಗ ಶೆಟ್ಟಿ, ಉದ್ಯಮಿ ಕಿರಣ್ ಶೆಟ್ಟಿ ಕೊಲ್ನಾಡುಗುತ್ತು, ಗೌತಮ್ ಜೈನ್ ಮೂಲ್ಕಿ ಅರಮನೆ, ಪಿಸಿಎ ಬ್ಯಾಂಕ್ ಅಧ್ಯಕ್ಷ ಸತೀಶ್ ಭಟ್, ನಿರ್ದೇಶಕ ಶ್ಯಾಮ್ ಪ್ರಸಾದ್, ಚಂದ್ರಹಾಸ್ ಪಡುತೋಟ ಭೇಟಿ ನೀಡಿ, ಪ್ರಸಾದ ಸ್ವೀಕರಿಸಿದರು.
ದೈವಸ್ಥಾನ ಆಡಳಿತ ಸಮಿತಿ ಅಧ್ಯಕ್ಷ ಚಂದ್ರಶೇಖರ್ ಜಿ., ಕಾರ್ಯದರ್ಶಿ ಎಂ.ಕೆ. ಹೆಬ್ಬಾರ್, ನವೀನ್ ಶೆಟ್ಟಿ ಎಡ್ಮೆಮಾರ್, ರಾಮಚಂದ್ರ ನಾಯ್ಕ, ರತಿ ಟೀಚರ್, ಸುದೇಶ್ ಪಡುಪಣಂಬೂರು, ಸಮಿತಿ ಪದಾಧಿಕಾರಿಗಳು ಉಪಸ್ಥಿತರಿದ್ದರು.
Kshetra Samachara
24/01/2022 09:44 am