ಬಜಪೆ : ಗುರುಪುರ ಶ್ರೀ ವಜ್ರದೇಹಿ ಮಠದ ಇದರ `ವಜ್ರದೇಹಿ ಜಾತ್ರೆ'ಯ ಪ್ರಥಮ ದಿನದ(ಜ. 3) ಧಾರ್ಮಿಕ ಪೂಜಾ ಕಾರ್ಯಕ್ರಮವು ಶ್ರೀ ರಾಜಶೇಖರಾನಂದ ಸ್ವಾಮೀಜಿ ಉಪಸ್ಥಿತಿ ಹಾಗೂ ಬ್ರಹ್ಮಶ್ರೀ ಅರುಣ್ ಭಟ್ ಖಂಡಿಗೆ ಅವರ ಆಧ್ವರ್ಯುತನದಲ್ಲಿ ಅದ್ಧೂರಿಯಿಂದ ನಡೆಯಿತು.
ಬೆಳಿಗ್ಗೆ ದ್ವಾದಶ ನಾರಿಕೇಳ ಮಹಾಗಣಯಾಗ, ನವಕ ಕಲಶಾಭಿಷೇಕ, ಕೂರ್ಮ ಮಹಾಸಾಲಿಗ್ರಾಮ ಮತ್ತು ಅನಂತ ಪದ್ಮನಾಭ ಮಹಾಸಾಲಿಗ್ರಾಮಕ್ಕೆ ಮಹಾಮಜ್ಜನ, ಸಾಮೂಹಿಕ ಆಶ್ಲೇಷಾ ಬಲಿ ಸೇವೆ ಮತ್ತು ಮಧ್ಯಾಹ್ನ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು.
ಅಪರಾಹ್ನ 2ರಿಂದ ಹವ್ಯಾಸಿ ಕಲಾವಿದರ ಕೂಡುವಿಕೆಯಲ್ಲಿ ಪಾರ್ತಿಸುಬ್ಬ ವಿರಚಿತ `ಚೂಡಾಮಣಿ' ಯಕ್ಷಗಾನ ತಾಳಮದ್ದಳೆ ನಡೆಯಿತು. ಸಂಜೆ 5ಕ್ಕೆ ಶ್ರೀ ದೇವರಿಗೆ ರಂಗಪೂಜೆ, ಶ್ರೀ ದೇವರ ಬಲಿ ಉತ್ಸವ, ಕಟ್ಟೆಪೂಜೆ, ಶ್ರೀ ದೇವರಿಗೆ ಶಯನ `ಕವಾಟ ಬಂಧನ' ನಡೆಯಿತು. ಜ. 4ರಂದು ಎರಡನೇ ದಿನದ ಪೂಜೆ ಹಾಗೂ ಸಾಂಸ್ಕøತಿಕ ಕಾರ್ಯಕ್ರಮದ ಬಳಿಕ ರಾತ್ರಿ 9ರಿಂದ ಮೈಸಂದಾಯ, ರಕ್ತೇಶ್ವರಿ ಮತ್ತು ಅಣ್ಣಪ್ಪ ಪಂಜುರ್ಲಿ ದೈವಗಳ ನೇಮೋತ್ಸವ ಜರುಗಲಿದೆ.
Kshetra Samachara
03/01/2022 07:21 pm