ಮಂಗಳೂರು: ರಾಜ್ಯದಲ್ಲಿರುವ ಎಲ್ಲ ದೇವಸ್ಥಾನಗಳಲ್ಲಿ ಸಂಗ್ರಹವಾಗುವ ಸಂಪನ್ಮೂಲಗಳನ್ನು ಸರಕಾರ ಸದ್ಬಳಕೆಯಾಗುವಂತೆ ಮಾಡಲು ಎಲ್ಲ ದೇವಸ್ಥಾನಗಳ ಆಡಳಿತ ಮಂಡಳಿಗಳು ನೋಡಿಕೊಳ್ಳಬೇಕು ಎಂದು ಮಾಣಿಲ ಕ್ಷೇತ್ರದ ಶ್ರೀ ಮೋಹನದಾಸ ಸ್ವಾಮೀಜಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ರಾಜ್ಯದಲ್ಲಿ ದೊಡ್ಡದಾದ ದೇವಸ್ಥಾನಗಳು ಅನೇಕ ಇವೆ. ಅಲ್ಲದೆ, ಆದಾಯ ತರುವಂತಹ ಅನೇಕ ದೇಗುಲಗಳಿವೆ. ಇವುಗಳನ್ನು ನೇರವಾಗಿ ಸರಕಾರ ನಡೆಸದಿದ್ದರೆ, ಅಲ್ಲಿ ಇರುವಂತಹ ಸಂಪನ್ಮೂಲಗಳನ್ನು ನಿರ್ವಹಿಸಲು ಕಾನೂನಾತ್ಮಕ ಕ್ರಮಗಳಿವೆ.
ಸಂಪತ್ತನ್ನು ಸದ್ಬಳಕೆ ಮಾಡುವ ವಿಷಯದಲ್ಲಿ ಕಾನೂನಾತ್ಮಕ ಕ್ರಮಗಳನ್ನು ಅನುಸರಿಸುವ ಅಗತ್ಯವಿದೆ. ಸಂಪತ್ತನ್ನು ದುರ್ಬಳಕೆ ಮಾಡದಂತೆ ನೋಡಿಕೊಳ್ಳಬೇಕಾದ ಅನಿವಾರ್ಯತೆ ಇದೆ ಹಾಗೂ ಸರ್ಕಾರ ದೇವಸ್ಥಾನಗಳಲ್ಲಿ ಯಾವುದೇ ಹಸ್ತಕ್ಷೇಪ ಮಾಡಬಾರದು. ಮುಖ್ಯಮಂತ್ರಿಗಳ ನಿರ್ಧಾರ ಎಲ್ಲ ಮಠಮಾನ್ಯಗಳಿಗೆ ಅನ್ವಯ ಆಗಲಿ ಎಂಬುದೇ ನನ್ನ ಆಶಯ ಎಂದರು.
PublicNext
02/01/2022 09:03 pm