ಬಜಪೆ: ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನದಲ್ಲಿ ಡಿ.19ರಂದು ಪದಚ್ಚಿಲ್ ಸೇವೆ ಹಾಗೂ ರಾತ್ರಿ ದೊಡ್ಡ ಗಾಯತ್ರಿ ಪೂಜೆ, ಡಿ.20ರಂದು ರಂಗಪೂಜೆ,21ರಂದು ಶ್ರೀ ಕೊಡಮಣಿಂತ್ತಾಯ ದೈವದ ನೇಮೋತ್ಸವ ಭಕ್ತಿ ಸಂಭ್ರಮದಿಂದ ಜರುಗಿತು.
ಈ ಸಂದರ್ಭ ದೇವಸ್ಥಾನದ ತಂತ್ರಿವರ್ಯರಾದ ಸುಬ್ರಹ್ಮಣ್ಯ ತಂತ್ರಿ ಪೊಳಲಿ, ವೆಂಕಟೇಶ್ ತಂತ್ರಿ, ಅರ್ಚಕರಾದ ನಾರಾಯಣ ಭಟ್, ಕೆ.ರಾಮ್ ಭಟ್, ಮಾಧವ ಮಯ್ಯ, ವಿಷ್ಣುಮೂರ್ತಿ ನಟ್ಟೋಜ, ಆಡಳಿತ ಮೊಕ್ತೇಸರ ಡಾ. ಮಂಜಯ್ಯ ಶೆಟ್ಟಿ ಅಮ್ಮುಂಜೆಗುತ್ತು ಮತ್ತಿತರ ಮೊಕ್ತೇಸರರು ಉಪಸ್ಥಿತರಿದ್ದರು.
Kshetra Samachara
22/12/2021 07:40 pm