ಕಾಪು: ಮಲ್ಲಾರು ಶ್ರೀ ಬ್ರಹ್ಮ ಬೈದರ್ಕಳ ಗರಡಿಯ ವಾರ್ಷಿಕ ನೇಮೋತ್ಸವ ಸಂಪನ್ನಗೊಂಡಿದೆ.ತುಳುನಾಡಿನ 66 ಮೂಲ ಗರಡಿಗಳಲ್ಲಿ ಒಂದೆಂಬ ಖ್ಯಾತಿಯೂ ಮಲ್ಲಾರು ಗರಡಿಗೆ ಇದೆ.
ಶ್ರೀ ಬ್ರಹ್ಮ ಬೈದರ್ಕಳ ಗರಡಿಗಳು ವಿಶಿಷ್ಟ ಆರಾಧನಾ ಸ್ಥಾನಗಳಾಗಿ ತಮ್ಮದೇ ಆದ ಆಶಯ, ವೈಶಿಷ್ಟ ಹೊಂದಿ ಗ್ರಾಮ ಆರಾಧಾನಾಲಯ ಆಗಿ ರೂಪುಗೊಂಡ ಇತಿಹಾಸ ಬಹು ರೋಚಕ. ಈ ಪುಣ್ಯಭೂಮಿಯಲ್ಲಿ ತಮ್ಮ ತ್ಯಾಗ- ಬಲಿದಾನಗಳಿಂದ ವೀರ ಪುರುಷರಾದ ಕೋಟಿ-ಚೆನ್ನಯರು ದೈವತ್ವ ಪಡೆದು ಪೂಜಿಸಲ್ಪಡುತ್ತಿದ್ದಾರೆ.
ಕಾಪು ತಾಲೂಕಿನ ಮಲ್ಲಾರು ಗ್ರಾಮದಲ್ಲಿರುವ ಗರಡಿಗೆ ತನ್ನದೇ ಆದ ಪರಂಪರೆ, ಇತಿಹಾಸವಿದ್ದು ಸುತ್ತಮುತ್ತಲಿನ ಭಕ್ತರು ಸೇವೆ ಸಲ್ಲಿಸುತ್ತಿದ್ದಾರೆ. ಆರಾಧನೆಗಾಗಿ ಬರುವ ಭಕ್ತರ ಸಂಖ್ಯೆ ವರ್ಷದಿಂದ ವರ್ಷಕ್ಕೆ ವೃದ್ಧಿಸುತ್ತಾ ಬಂದಿರುವುದು ಈ ಕ್ಷೇತ್ರದ ವಿಶೇಷ.
ಶುಕ್ರವಾರ ಹಸಿರುವಾಣಿ ಯೊಂದಿಗೆ ಗರಡಿ ಪ್ರವೇಶವಾಗಿ ಈ ವರ್ಷದ ವಾರ್ಷಿಕ ನೇಮೋತ್ಸವ ಆರಂಭಗೊಂಡಿತು. ಭಾನುವಾರ ರಾತ್ರಿ ಬೈದರ್ಕಳ ನೇಮೋತ್ಸವ ವಿಜೃಂಭಣೆಯಿಂದ ನಡೆಯಿತು.ಸೋಮವಾರ ಮಾಯಾಂದಲ ನೇಮ ಹಾಗೂ ಪಿಲಿಚಂಡಿ ದೈವ ನೇಮ ನಡೆಯಿತು.ಸಾವಿರಾರು ಭಕ್ತರು ನೇಮೋತ್ಸವದಲ್ಲಿ ಪಾಲ್ಗೊಂಡು, ಗಂಧ ಪ್ರಸಾದ ಸ್ವೀಕರಿಸಿದರು.
Kshetra Samachara
20/12/2021 06:35 pm