ಸುರತ್ಕಲ್ :ಸನಾತನ ಹಿಂದೂ ಸಂಸ್ಕೃತಿ ಸಂರಕ್ಷಣೆ ನಮ್ಮೆಲ್ಲರ ಜವಾಬ್ದಾರಿ, ಹಿಂದೂ ಸಮಾಜ ಭಾರತದ ಭದ್ರ ಬುನಾದಿ, ಹಿಂದೂ ವಿಚಾರ ದಾರೆಗಳು ವಿಶ್ವಮಾನ್ಯವಾದುದು ಎಂದು ಬೆಂಗಳೂರಿನ ಬಾಲವಾಗ್ಮಿ ಕು. ಹಾರಿಕಾ ಮಂಜುನಾಥ್ ನುಡಿದರು.
ಅವರು ಸುರತ್ಕಲ್ ನಲ್ಲಿ ಹಿಂದೂ ಜಾಗರಣ ವೇದಿಕೆ ಸುರತ್ಕಲ್ ನಗರ ಅಶ್ರಯದಲ್ಲಿ ನಡೆದ ಕರಪತ್ರ ಅಭಿಯಾನ ಹಾಗೂ ಹಿಂದೂ ಯುವ ಸಮ್ಮಿಲನ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದರು.
ಭಾರತೀಯ ಕೌಟುಂಬಿಕ ಪದ್ದತಿಯಲ್ಲಿ ಮಾತೆಯರಿಗೆ (ಹೆಣ್ಣು)ವಿಶಿಷ್ಠ ಗೌರವವಿದೆ ನಮ್ಮ ಹಿಂದೂ ಸಮಾಜದ ಆಳಿವು ಉಳಿವು ಅಕೆಯ ಕೈಯಲ್ಲಿದೆ. ಉತ್ತಮ ವಿಚಾರಧಾರೆಗಳನ್ನು ತಮ್ಮ ಮಕ್ಕಳಿಗೆ ತಿಳಿ ಹೇಳಿ ಹಿಂದೂ ಸಂಸ್ಕøತಿಯನ್ನು ಉಳಿಸುವ ಕಾರ್ಯ ಮಾಡಬೇಕಿದೆ ಎಂದ ಅವರು ಅನ್ಯ ಧರ್ಮಿಯರ ಅಮಿಷಗಳಿಗೆ ಬಲಿಯಾಗದೆ ಮತಾಂತೆ, ಲವ್ ಜಿಹಾದ್ ವಿರುದ್ದ ಸಮಗ್ರ ಹೋರಾಟ ನಡೆಸುವ ಮಹತ್ವದ ಹೋಣೆಗಾರಿಕೆ ಅಕೆಯ ಮೇಲಿದೆ ಎಂದರು.
ಭಾರತೀಯ ಪಠ್ಯ ಪುಸ್ತಕದಲ್ಲಿನ ಇತಿಹಾಸ, ಚರಿತ್ರೆ ಬದಲಾಗಬೇಕಿದೆ, ದಾಳಿಕೋರ ಅನ್ಯಧರ್ಮಿಯರನ್ನು ಹೀರೋಗಳಂತೆ ಬಿಂಬಿಸುವ ವ್ಯವಸ್ಥೆಗೆ ಕಡಿವಾಣ ಹಾಕಬೇಕಿದೆ. ದೇಶಭಕ್ತಿ, ಹಿಂದೂ ಶಕ್ತಿಯನ್ನು ಪ್ರತಿಪಾದಿಸುವ ವ್ಯಕ್ತಿಗಳ ಚರಿತ್ರೆ ಜೀವನದ ಯಶೋಗಾಥೆ ಇಂದಿನ ಶಿಕ್ಷಣ ವ್ಯವಸ್ಥೆಯಲ್ಲಿ ಪ್ರಚುರಪಡಿಸ ಬೇಕಿದೆ. ಎಂದ ಅವರು ವೀರ ಸಾರ್ವಕರ್ ರವರನ್ನು ವಿರೋಧಿಸುವವರು ಈ ದೇಶದ ನಿಜವಾದ ದೇಶದ್ರೋಹಿಗಳು ಎಂದ ಅವರು ಸುರತ್ಕಲ್ ಪ್ರದೇಶದಲ್ಲಿ ವೃತ್ತಕ್ಕೆ ವೀರ ಸಾರ್ವಕರ್ ಹೆಸರು ಇಡುವ ವಿಚಾರಕ್ಕೆ ವಿರೋದಿಸಿದರೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಾವಿರಾರು ವೀರಸಾರ್ವಕರ್ ವೃತ್ತ ಸೃಷ್ಠಿಯಾಗ ಬಹುದು ಎಂದು ಎಚ್ಚರಿಕೆ ನೀಡಿದರು.
ಹಿಂದೂ ಜಾಗರಣ ವೇದಿಕೆಯ ದಕ್ಷಿಣ ಪ್ರಾಂತ ಉಪಾಧ್ಯಕ್ಷ ಕಿಶೋರ್ ಕೊಡಿಕಲ್ ಮಾತನಾಡಿದರು.
ಖಂಡಿಗೆ ಬೀಡು ಗಡಿ ಪ್ರಧಾನರಾದ ಅದಿತ್ಯ ಮುಕ್ಕಾಲ್ಢಿ ಕಾರ್ಯಕ್ರಮ ಉದ್ಘಾಟಿಸಿದರು. ಹಿಂದೂ ಜಾಗರಣ ವೇದಿಕೆಯ ವಿಭಾಗ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಕುಕ್ಕೆಹಳ್ಳಿ, ಜಿಲ್ಲಾ ಅಧ್ಯಕ್ಷ ಹರೀಶ್ ಶಕ್ತಿನಗರ, ಜಿಲ್ಲಾ ಪ್ರಧಾನ ಕರ್ಯದರ್ಶಿ ಅಮಿತ್ ಗುಂಡಳಿಕೆ, ಜಿಲ್ಲಾ ಉಪಾಧ್ಯಕ್ಷ ಸತೀಶ್ ಮುಂಚುರು, ಜಿಲ್ಲಾ ಸಂಯೋಜಕ ಪುಷ್ಪರಾಜ್ ಕುಳಾಯಿ, ನಗರ ಕಾರ್ಯದರ್ಶಿ ಭವಾನಿ ಶಂಕರ್ ಉಪಸ್ಥಿತರಿದ್ದರು.
Kshetra Samachara
22/11/2021 06:01 pm