ಮಂಗಳೂರು: ನಗರದ ರಥಬೀದಿಯಲ್ಲಿರುವ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಇಂದು ಕಾರ್ತಿಕ ಏಕಾದಶಿಯ ಪ್ರಯುಕ್ತ ಶ್ರೀ ವೀರ ವೆಂಕಟೇಶ ದೇವರಿಗೆ ವಿಶೇಷ ಪಂಚಾಮೃತ, ಗಂಗಾಭಿಷೇಕ, ಕನಕಾಭಿಷೇಕ, ಪುಳಕಾಭಿಷೇಕ ನೆರವೇರಿದವು.
ಬಳಿಕ ಸಾಯಂಕಾಲ ಶ್ರೀ ದೇವರ ಮಹಾಪೂಜೆ ನಡೆಯಿತು. ಇದೇ ವೇಳೆ ದೇವಳದ ಮೊಕ್ತೇಸರ ಸಿ. ಎಲ್. ಶೆಣೈ, ಪ್ರಶಾಂತ್ ರಾವ್, ರಾಮಚಂದ್ರ ಕಾಮತ್, ತಂತ್ರಿ ಗಳಾದ ಪಂಡಿತ್ ನರಸಿಂಹ ಆಚಾರ್ಯ, ಪ್ರಧಾನ ಅರ್ಚಕ ವೇದಮೂರ್ತಿ ಚಂದ್ರಕಾಂತ್ ಭಟ್, ವೇದಮೂರ್ತಿ ಹರೀಶ್ ಭಟ್ ಹಾಗೂ ನೂರಾರು ಭಕ್ತಾದಿಗಳು ಉಪಸ್ಥಿತರಿದ್ದರು.
Kshetra Samachara
15/11/2021 09:38 pm