ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಇಂದ್ರಾಳಿಯಲ್ಲೂ ತೀರ್ಥೋದ್ಭವ!: ಪವಿತ್ರ ಸ್ನಾನದ ಧನ್ಯತಾ ಭಾವ...

ಉಡುಪಿ: ತುಲಾ ಸಂಕ್ರಮಣ ದಿನ ಕಾವೇರಿಯಲ್ಲಿ ತೀರ್ಥೋದ್ಭವ ಆಗುವುದನ್ನು ನಾವು ಕೇಳಿದ್ದೇವೆ. ಆದರೆ, ಉಡುಪಿಯಲ್ಲಿಯೂ ಇದೇ ರೀತಿ ಆಚರಣೆ ಜಾರಿಯಲ್ಲಿದೆ. ಇಂದ್ರಾಳಿಯ ದಟ್ಟ ಕಾನನ ಮಧ್ಯೆ ಇರುವ ಪುಟ್ಟ ಕೆರೆಗೆ ವರ್ಷಪೂರ್ತಿ ನೆಲದಾಳದಿಂದ ಗುಪ್ತವಾಗಿ ಹರಿದು ಬರುತ್ತವೆ ಸ್ಫಟಿಕ ಶುಭ್ರ ಜಲಧಾರೆ...!

ಅಲ್ಲೇ ಪಕ್ಕದಲ್ಲಿ ನಾಗಸನ್ನಿಧಿ ಮತ್ತು ಆಂಜನೇಯ ಗುಡಿ. ಈ ಪ್ರಕೃತಿ ರಮಣೀಯ ದೃಶ್ಯ ಕಾಣಸಿಗುವುದು ಉಡುಪಿಯ ಇಂದ್ರಾಳಿಯಲ್ಲಿ. ಇಂದ್ರಾಳಿ ಪಂಚ ದುರ್ಗಾ ಪರಮೇಶ್ವರಿ ದೇವಿ ಸನ್ನಿಧಾನದಲ್ಲಿರುವ ಪುಷ್ಕರಣಿಯಲ್ಲಿ ತಲಕಾವೇರಿ ತೀರ್ಥೋದ್ಭವ ದಿನವೇ ತೀರ್ಥಸ್ನಾನ ನಡೆಯುತ್ತದೆ.

ದಶಕದ ಹಿಂದೆ ಇಲ್ಲಿ ಸಾವಿರಾರು ಜನ ತೀರ್ಥ ಸ್ನಾನ ಮಾಡುತ್ತಿದ್ದರು. ಸದ್ಯ ನಗರೀಕರಣದಿಂದಾಗಿ ಈ ಹೊಳೆ ಕಲುಷಿತವಾದ ಕಾರಣ ಭಕ್ತಾದಿಗಳ ಸಂಖ್ಯೆ ಕುಂಟುತ್ತಾ ಸಾಗಿದೆ. ದುರ್ಗೆಯ ಸಪ್ತ ಮಾತೃಕಾ ಸ್ವರೂಪದಲ್ಲಿ ಒಂದಾಗಿರುವ ಇಂದ್ರಾಣಿ, ಇಲ್ಲಿ ನದಿ ರೂಪದಲ್ಲಿ ಹರಿಯುತ್ತಾಳೆ ಎನ್ನುವುದು ನಂಬಿಕೆ.

ಅನೇಕ ಔಷಧೀಯ ಗಿಡಗಳ ಬೇರುಗಳಡಿಯಿಂದ ಹಾದು ಬರುವ ಈ ನೀರು ಅನೇಕ ಚರ್ಮವ್ಯಾಧಿಗಳಿಗೆ ಔಷಧಿ. ಅದರಲ್ಲೂ ತುಲಾ ಸಂಕ್ರಮಣ ದಿನ ಇಲ್ಲಿ ಸ್ನಾನ ಮಾಡಿದರೆ ವಿಶೇಷ ಫಲ ಪ್ರಾಪ್ತಿಯಾಗುತ್ತದೆ. ಪಾಪಕರ್ಮ ನಶಿಸಿ, ಪುಣ್ಯ ಸಂಚಯನವಾಗುತ್ತದೆ ಎಂಬ ಗಾಢ ನಂಬಿಕೆ ಇದೆ. ಹಿಂದೆ ಇಲ್ಲಿ ತುಲಾ ಸಂಕ್ರಮಣದ ದಿನ ಪುಟ್ಟ ಜಾತ್ರೆ ನಡೆಯುತ್ತಿತ್ತಂತೆ. ಆದರೆ, ಈಗ ಮಾಹಿತಿ ಕೊರತೆಯಿಂದ ಈ ಸಂಪ್ರದಾಯ ನಿಂತುಹೋಗಿದೆ. ಇದನ್ನು ಮರು ಆರಂಭಿಸಬೇಕು ಎಂಬ ತುಡಿತ ಇಲ್ಲಿಯ ಪರಿಸರ ಪ್ರೇಮಿಗಳಲ್ಲಿದೆ.

Edited By : Shivu K
Kshetra Samachara

Kshetra Samachara

18/10/2021 01:02 pm

Cinque Terre

16.97 K

Cinque Terre

0

ಸಂಬಂಧಿತ ಸುದ್ದಿ