ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಭಜರಂಗದಳ ಕಾರ್ಯಕರ್ತರಿಗೆ ಬಾಂಬ್ ದೀಕ್ಷೆ ಮಾಡಿಲ್ಲ, ನಾವು ತ್ರಿಶೂಲ ದೀಕ್ಷೆ ಮಾಡಿದ್ದು: ವಿಎಚ್ ಪಿ ಮುಖಂಡ ಶರಣ್ ಪಂಪ್ ವೆಲ್

ಮಂಗಳೂರು: ಬಜರಂಗದಳ ಕಾರ್ಯಕರ್ತರಿಗೆ ನಾವು ತ್ರಿಶೂಲ ದೀಕ್ಷೆ ಕಾರ್ಯಕ್ರಮ ಏನು ಮಾಡಿದ್ದೇವೆ, ಅದನ್ನು ಇಟ್ಕೊಂಡು ಕೆಲವರು ವಿರೋಧ ಮಾಡುತ್ತಿದ್ದಾರೆ. ನಾವು ನಮ್ಮ ಕಾರ್ಯಾಲಯದಲ್ಲಿ ಭಜರಂಗದಳ ಕಾರ್ಯಕರ್ತರಿಗೆ ಬಾಂಬ್ ದೀಕ್ಷೆ ಮಾಡಿಲ್ಲ. ನಾವು ತ್ರಿಶೂಲ ದೀಕ್ಷೆ ಮಾಡಿದ್ದು ಎಂದು ವಿಶ್ವಹಿಂದೂ ಪರಿಷತ್ ನ ಮುಖಂಡ ಶರಣ್ ಪಂಪ್ ವೆಲ್ ಹೇಳಿದ್ದಾರೆ.

ಮಂಗಳೂರು ನಗರದಲ್ಲಿ ಮಾತನಾಡಿದ ಅವರು, ನಾವು ಶಕ್ತಿಯ ಆರಾಧಕರು. ನಮ್ಮ ಕಾರ್ಯಕರ್ತರ ಆತ್ಮರಕ್ಷಣೆ, ಧರ್ಮ ರಕ್ಷಣೆಗೋಸ್ಕರ ಹಾಗೂ ಆತ್ಮಸ್ಥೈರ್ಯವನ್ನು ಹೆಚ್ಚು ಮಾಡಲು ತ್ರಿಶೂಲ ದೀಕ್ಷೆ ಕಾರ್ಯಕ್ರಮ ಏರ್ಪಡಿಸಿದ್ದೇವು. ದೇಶದಲ್ಲಿ ಪ್ರತಿವರ್ಷ ಹೊಸ ಹೊಸ ಭಜರಂಗದಳದ ಸದಸ್ಯರಿಗೆ ತ್ರಿಶೂಲ ದೀಕ್ಷೆ ಕಾರ್ಯಕ್ರಮ ನಡೆಯುತ್ತದೆ. ಈ ಹಿಂದೆ ಕೊರೊನಾ ಕಾರಣದಿಂದ ಈ ಕಾರ್ಯಕ್ರಮ ನಡೆಸಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಮೊನ್ನೆ ಆಯುಧಪೂಜೆ ವೇಳೆ ಈ ಕಾರ್ಯಕ್ರಮ ಮಾಡಿದ್ದೇವು. ತ್ರಿಶೂಲ ದೀಕ್ಷೆ ಯಾರ ವಿರುದ್ದನೂ ಇಲ್ಲ. ಅಥವಾ ಯಾರನ್ನೋ ಕೊಲ್ಲಬೇಕು ಹೀಗೆ ದುರುದ್ದೇಶ ಇಟ್ಕೊಂಡು ನಾವು ಈ ಕಾರ್ಯಕ್ರಮವನ್ನು ಆಯೋಜಿಸಿಲ್ಲ.ಕೇವಲ ಕಾರ್ಯಕರ್ತರಲ್ಲಿ ಆತ್ಮಸ್ಥೈರ್ಯ ಮಾಡಲು ತ್ರಿಶೂಲ ದೀಕ್ಷೆ ಕಾರ್ಯಕ್ರಮ ಮಾಡಿದ್ದೇವೆ ಎಂದು ಸ್ಪಷ್ಟನೆ ನೀಡಿದರು.

ಕಾನೂನುಬದ್ದವಾಗಿ ನಾವು ಈ ಕಾರ್ಯಕ್ರಮವನ್ನು ಮಾಡಿದ್ದೇವೆ. ಸಾರ್ವಜನಿಕವಾಗಿ ಮಾಡದೇ ನಮ್ಮ ಕಾರ್ಯಾಲಯದಲ್ಲಿ ಮಾಡಿದ್ದೇವೆ ಎಂದರು. ಪ್ರತಿ ವರ್ಷ ಹೊಸ ಹೊಸ ಕಾರ್ಯಕರ್ತರು ದೇಶಕ್ಕಾಗಿ, ಸಮಾಜಕ್ಕಾಗಿ ಸೇವೆ ಮಾಡಲು ಈ‌ ತ್ರಿಶೂಲ ದೀಕ್ಷೆ ಕಾರ್ಯಕ್ರಮ ‌ಮಾಡ್ತೇವೆ ಎಂದು ಸ್ಪಷ್ಟನೆ ನೀಡಿದರು

Edited By : Manjunath H D
Kshetra Samachara

Kshetra Samachara

15/10/2021 02:55 pm

Cinque Terre

7.64 K

Cinque Terre

7

ಸಂಬಂಧಿತ ಸುದ್ದಿ