ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಆಯುಧ ಪೂಜೆ ಸಂಭ್ರಮ; ವಿವಿಧ ದೇವಾಲಯ ಮುಂದೆ ವಾಹನ ಸಾಲು

ಮಂಗಳೂರು: ನಗರದ ಎಲ್ಲ ದೇವಾಲಯಗಳ ಮುಂಭಾಗ ಇಂದು ಸಾಲು ಸಾಲು ವಾಹನಗಳು ನಿಂತಿದ್ದು, ಎಲ್ಲೆಡೆ ವಾಹನ ಪೂಜೆಯ ಸಂಭ್ರಮ ಎದ್ದು ಕಾಣುತ್ತಿತ್ತು.

ನವರಾತ್ರಿಯ ಮಹಾನವಮಿ ದಿನವಾದ ಇಂದು ಆಯುಧ ಪೂಜೆಯ ದಿನವೂ ಹೌದು. ಇಂದು ಶಸ್ತ್ರಗಳಿಗೆ, ಆಯುಧಗಳಿಗೆ ಪೂಜೆ ನೆರವೇರಿಸಲಾಗುತ್ತದೆ. ಆದರೆ, ಆಧುನಿಕ ಕಾಲಘಟ್ಟದಲ್ಲಿ ಆಯುಧಗಳಿಗೆ ಬದಲಾಗಿ ವಾಹನಗಳಿಗೆ ಪೂಜೆ ನೆರವೇರಿಸಲಾಗುತ್ತದೆ‌. ವರ್ಷಪೂರ್ತಿ ಹೊತ್ತೊಯ್ಯುವ ವಾಹನಗಳನ್ನು ಶುಚಿಯಾಗಿ ತೊಳೆದು ದೇವಾಲಯದಲ್ಲಿ ಪೂಜೆ ಮಾಡಲಾಗುತ್ತದೆ. ಇಲ್ಲಿ ವಾಹನದಲ್ಲಿ ಹೋಗುವಾಗ ಯಾವುದೇ ಅವಘಡ ಸಂಭವಿಸದಿರಲಿ ಎಂಬ ನಂಬಿಕೆಯೂ ಇದೆ.

ಮಂಗಳೂರಿನ ಶ್ರೀ ಮಂಗಳಾದೇವಿ, ಶರವು ಶ್ರೀ ಮಹಾಗಣಪತಿ ದೇವಾಲಯ, ಶ್ರೀಕ್ಷೇತ್ರ ಕಟೀಲು, ಪೊಳಲಿ ರಾಜರಾಜೇಶ್ವರಿ ದೇವಾಲಯ, ಉರ್ವ ಶ್ರೀ ಮಾರಿಯಮ್ಮ ದೇವಾಲಯಗಳಲ್ಲಿ ಸಾವಿರಾರು ಮಂದಿ ಭಕ್ತಾದಿಗಳು ವಾಹನ ಪೂಜೆ ನೆರವೇರಿಸಿದರು‌.

Edited By : Manjunath H D
Kshetra Samachara

Kshetra Samachara

14/10/2021 06:18 pm

Cinque Terre

5.15 K

Cinque Terre

1

ಸಂಬಂಧಿತ ಸುದ್ದಿ