ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಮಹಾಲಯ ಅಮಾವಾಸ್ಯೆ ಹಿನ್ನೆಲೆ: ಭಕ್ತರಿಂದ ಸಮುದ್ರಸ್ನಾನ,ಪಿಂಡಪ್ರದಾನ

ಮಲ್ಪೆ: ಇವತ್ತು ಮಹಾಲಯ ಅಮಾವಾಸ್ಯೆ. ಪ್ರತಿ ವರ್ಷದಂತೆ ಈ ವರ್ಷವೂ ಆಸ್ತಿಕರು ಮಲ್ಪೆಯಲ್ಲಿ ಸಾಂಪ್ರದಾಯಿಕ ಸಮುದ್ರ ಸ್ನಾನ ಮಾಡಿ ತಮ್ಮ ಹಿರಿಯರಿಗೆ ಪಿಂಡ ಪ್ರದಾನ ಮಾಡುವ ವಿಧಿ ನೆರವೇರಿಸಿದರು.

ಉಡುಪಿ ಜಿಲ್ಲೆಯ ಮಲ್ಪೆ ಕಡಲ ತೀರದಲ್ಲಿ ಇಂದು ಬೆಳಿಗ್ಗಿನಿಂದಲೇ ಸಾವಿರಾರು ಜನರು ಆಗಮಿಸಿ, ಅಗಲಿದ ಆತ್ಮಗಳಿಗೆ ಪಿಂಡ ಪ್ರದಾನ ಮತ್ತು ತರ್ಪಣ ಬಿಟ್ಟು ಹಿರಿಯರಿಗೆ ಗೌರವ ತೋರಿದರು.ಮಲ್ಪೆ ಮಾತ್ರವಲ್ಲದೆ ಕುಂದಾಪುರ ,ಮರವಂತೆ ಮುಂತಾದ ಕಡೆಗಳಲ್ಲೂ ಭಕ್ತರು ಹೆಚ್ಚಿನ‌ ಸಂಖ್ಯೆಯಲ್ಲಿ ಆಗಮಿಸಿ ಸಮುದ್ರಸ್ನಾನ ನೆರವೇರಿಸಿ ತಮ್ಮ‌ಹಿರಿಯರಿಗೆ ಪಿಂಡ ಪ್ರದಾನ ಮಾಡಿದರು.

Edited By : Shivu K
Kshetra Samachara

Kshetra Samachara

06/10/2021 01:03 pm

Cinque Terre

14.61 K

Cinque Terre

0

ಸಂಬಂಧಿತ ಸುದ್ದಿ