ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿಯಲ್ಲಿ ವೈಭವದ ವಿಟ್ಲಪಿಂಡಿ ಉತ್ಸವ, ರಥೋತ್ಸವ ಸಂಪನ್ನ

ಉಡುಪಿ: ಉಡುಪಿಯ ಶ್ರೀ ಕೃಷ್ಣಮಠದಲ್ಲಿ ಕೃಷ್ಣಜನ್ಮಾಷ್ಟಮಿಯ ಮರುದಿನ ನಡೆಯುವ ಶ್ರೀಕೃಷ್ಣ ಲೀಲೋತ್ಸವ ಇಂದು ವೈಭವದಿಂದ ಸಂಪನ್ನಗೊಂಡಿತು.ಮಧ್ಯಾಹ್ನ ಸ್ವರ್ಣ ರಥದಲ್ಲಿ ಕೃಷ್ಣನ ಮಣ್ಣಿನ ವಿಗ್ರಹವನ್ನು ಇಟ್ಟು ವೈಭವದ ಮೆರವಣಿಗೆ ನಡೆಸಲಾಯಿತು.

ಈ ವೇಳೆ ರಥಬೀದಿಯಲ್ಲಿ ವಿವಿಧ ವೇದ ವಾದ್ಯ ಘೋಷಗಳ ಜೊತೆಗೆ ನಡೆದ ರಥೋತ್ಸವವು ವಿಟ್ಲಪಿಂಡಿ ಉತ್ಸವಕ್ಕೆ ಮೆರಗು ನೀಡಿತು.

ಸಾಂಪ್ರದಾಯಿಕ ಗೊಲ್ಲರು ರಥಬೀದಿಯಲ್ಲಿ ಕಟ್ಟಿದ್ದ ಮೊಸರಿನ ಕುಡಿಕೆಗಳನ್ನು ಒಡೆಯುವ ಮೂಲಕ ನೆರೆದ ಭಕ್ತಸಮೂಹವನ್ನು ರೋಮಾಂಚಕ್ಕೀಡುಮಾಡಿದರು.ಇಂತಹ ವಿಶೇಷ ಸಂದರ್ಭಗಳಲ್ಲಿ ಮಾತ್ರ ಅಷ್ಟಮಠದ ವಿವಿಧ ಯತಿಗಳು ಒಟ್ಟಾಗುತ್ತಾರೆ.ಇವತ್ತು ಮಠಾಧೀಶರುಗಳ ನೇತೃತ್ವದಲ್ಲಿ ನಡೆದ ರಥೋತ್ಸವ ನೋಡಿ ನೂರಾರು ಭಕ್ತರು ಪುಳಕಿತರಾದರು.

ಕೋವಿಡ್ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ಭಾಗಿಯಾಗಲು ಅವಕಾಶವಿರಲಿಲ್ಲ‌.ಪ್ರತಿವರ್ಷ ವಿಟ್ಲಪಿಂಡಿ ಸಂಭ್ರಮಕ್ಕೆ ಸಾವಿರಾರು ಜನರು ಸಾಕ್ಷಿಯಾಗುತ್ತಾರೆ.ಆದರೆ ಈ ಬಾರಿ ಸಾರ್ವಜನಿಕರು ಕೋವಿಡ್ ನಿಯಮಾವಳಿ ಧಿಕ್ಕರಿಸಲು ಮುಂದಾಗಲಿಲ್ಲ.ವಿಟ್ಲಪಿಂಡಿ ಉತ್ಸವದ ಕೊನೆಗೆ ಮಧ್ವಸರೋವರದಲ್ಲಿ ಕೃಷ್ಣನ ಮೃಣ್ಮಯ ಮೂರ್ತಿಯನ್ನು ಜಲಸ್ಥಂಭನ ಮಾಡಲಾಯಿತು.

Edited By : Manjunath H D
Kshetra Samachara

Kshetra Samachara

31/08/2021 05:24 pm

Cinque Terre

11.56 K

Cinque Terre

1

ಸಂಬಂಧಿತ ಸುದ್ದಿ