ಕಾಪು : ಲೋಕಕಕ್ಕೆ ಬಂದಿರುವ ಕಂಟಕ ದೂರವಾಗಲಿ ಎಂದು ಶ್ರೀ ವಾಸುದೇವ ಸ್ವಾಮಿಗೆ ಸಹಸ್ರ ತುಳಸಿ ಅರ್ಚನೆ
ಕಾಪು : ಶ್ರೀ ವಾಸುದೇವ ಸ್ವಾಮಿ ದೇವಸ್ಥಾನ ಕೊಪ್ಪಲಂಗಡಿ ಕಾಪು, ದೇವಸ್ಥಾನದಲ್ಲಿ ಸಹಸ್ರ ನಾಮ ತುಳಸಿ ಅರ್ಚನೆ ಸೇವೆ ಇಂದು ನಡೆಯಿತು.
ವಾಸುದೇವಾ ಸ್ವಾಮಿ ಭಜನಾ ಮಂಡಳಿಯ ನೇತೃತ್ವದಲ್ಲಿ ಊರ ಭಕ್ತಾದಿಗಳ ಸಹಕಾರದಿಂದ ನಡೆಯಿತು. ದೇವಸ್ಥಾನದ ಪ್ರಧಾನ ಅರ್ಚಕರಾದ ನಾಗರಾಜ್ ಭಟ್ ನೇತೃತ್ವದಲ್ಲಿ ಪೂಜಾ ವಿಧಿ ವಿಧಾನಗಳು ನೆರವೇರಿದವು.
ಲೋಕಕ್ಕೆ ಬಂದಿರುವ ಕಂಟಕಗಳು ದೂರವಾಗಲಿ ಲೋಕ ಕಲ್ಯಾಣವಾಗಲಿ ಸರ್ವರಿಗೂ ದೇವರು ಒಳಿತನ್ನು ಮಾಡಲಿ ಎಂದು ಪ್ರಾರ್ಥಿಸಲಾಯಿತು.
ಈ ಸಂದರ್ಭ ಭಜನಾ ಮಂಡಳಿಯ ಅಧ್ಯಕ್ಷ ಉಮೇಶ್ ಪೂಜಾರಿ, ಕಾರ್ಯ ದರ್ಶಿ ಮಂಜುನಾಥ್, ಪ್ರಮುಖರಾದ ಉದಯ್ ಶೆಟ್ಟಿ, ಅನಿಲ್ ಶೆಟ್ಟಿ, ರಘುರಾಮ್ ಶೆಟ್ಟಿ, ಪ್ರವೀಣ್, ಶಂಕರ್ ಮತ್ತಿತರರು ಉಪಸ್ಥಿತರಿದ್ದರು
Kshetra Samachara
08/08/2021 03:13 pm