ಮುಲ್ಕಿ: ನೇಪಾಳದ ವಿಶ್ವ ಪ್ರಸಿದ್ಧ ಶ್ರೀ ಪಶುಪತಿನಾಥ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ ನಡೆಯುತ್ತಿದ್ದು, ರಾಜ್ಯ ಧಾರ್ಮಿಕ ಪರಿಷತ್ ಮಾಜಿ ಸದಸ್ಯ ಹಳೆಯಂಗಡಿ ಸಮೀಪದ ಮುಕ್ಕದ ಪಂಜ ಭಾಸ್ಕರ ಭಟ್ ಪುರೋಹಿತ ವರ್ಗದ ನೇತೃತ್ವದಲ್ಲಿ ಬ್ರಹ್ಮಕಲಶ ನಡೆಯಲಿದ್ದು, ನೇಪಾಳಕ್ಕೆ ತೆರಳಿದೆ.
ಫೆ. 21ರಿಂದ ಆರಂಭಗೊಂಡಿದ್ದು, 24ರ ವರೆಗೆ ಬ್ರಹ್ಮಕಲಶೋತ್ಸವ ಹೋಮ, ಪೂಜಾ ವಿಧಿವಿಧಾನ ನಡೆಯಲಿದೆ. ಕಳೆದ ಬುಧವಾರ ಪಂಜ ಭಾಸ್ಕರ ಭಟ್ ಅವರನ್ನೊಳಗೊಂಡ ಆರು ಜನರ ಪ್ರಥಮ ತಂಡ ನೇಪಾಳಕ್ಕೆ ತೆರಳಿದ್ದು, ಅಲ್ಲಿನ ಸರಕಾರದ ವತಿಯಿಂದ ದೇವಸ್ಥಾನದ ಆಡಳಿತ ವರ್ಗವು ವಿಮಾನ ನಿಲ್ದಾಣದಿಂದಲೇ ಪಂಜ ಭಾಸ್ಕರ್ ಭಟ್ ಅವರ ತಂಡಕ್ಕೆ ಭವ್ಯ ಸ್ವಾಗತ ನೀಡಿ ಬರಮಾಡಿಕೊಂಡಿದ್ದು, ಭಾಸ್ಕರ್ ಭಟ್ ಅವರ ಶಿಷ್ಯಂದಿರಾದ ಮಧುಸೂದನ್ ತಂತ್ರಿ ಮುಂದಾಳತ್ವದ 12 ಜನರ ಇನ್ನೊಂದು ತಂಡ ಶನಿವಾರ ರಾತ್ರಿ ನೇಪಾಲಕ್ಕೆ ತೆರಳಿದ್ದಾರೆ.
ಶ್ರೀ ಕ್ಷೇತ್ರ ಸನ್ನಿಧಾನದ ಬ್ರಹ್ಮ ಕಲಶಾಭಿಷೇಕದಲ್ಲಿ ಸಾನಿಧ್ಯ ಸಂಕೋಚ, ವಾಸ್ತು ಪೂಜೆ, ವಾಸ್ತು ಬಲಿ, ವಾಸ್ತು ಹೋಮ,ಬಿಂಬ ಶುದ್ದಿ ,ಶಾಂತಿ ಪ್ರಾಯಶ್ಚಿತ,ತತ್ವ ಹೋಮ ಅದ್ಭುತ ಶಾಂತಿ ಹಾಗೂ ಫೆ.24 ರಂದು ದೇವರಿಗೆ 109 ಕಲಶಾಭಿಷೇಕ ನ್ಯಾಸ ಪೂಜೆ, ಶಾಂತಿ ಹೋಮ ಮತ್ತು ಪ್ರಸನ್ನ ಪೂಜೆ ನಡೆಯಲಿದೆ ಎಂದು ಪಂಜ ಭಾಸ್ಕರ ಭಟ್ ತಿಳಿಸಿದ್ದಾರೆ.
Kshetra Samachara
24/02/2021 09:51 am