ಬಂಟ್ವಾಳ: ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಪೊಳಲಿ ಶ್ರೀ ರಾಜರಾಜೇಶ್ವರಿ
ದೇವಸ್ಥಾನದಲ್ಲಿ ದೇವರಿಗೆ ಕಲಶ ಅಭಿಷೇಕ ನಡೆಯಿತು.
ಫೆ.13ರಿಂದ ಉತ್ಸವ ಆರಂಭಗೊಂಡಿದ್ದು, ಫೆ. 21ರ ವರೆಗೆ ನಾನಾ ಧಾರ್ಮಿಕ ವಿಧಿವಿಧಾನಗಳೊಂದಿಗೆ ನಡೆಯಲಿದೆ. ಇಂದು ಬೆಳಗ್ಗೆ 8.20ರಿಂದ 8.55ರ ಮೀನ ಲಗ್ನ ಸುಮುಹೂರ್ತದಲ್ಲಿ ಶ್ರೀ ರಾಜರಾಜೇಶ್ವರಿ ಅಮ್ಮನಿಗೆ, ಸುಬ್ರಹ್ಮಣ್ಯ ಸ್ವಾಮಿ, ವಿನಾಯಕ, ಭದ್ರಕಾಳಿ ದೇವರಿಗೆ ಜೀವಕಲಶ ಅಭಿಷೇಕ, ಪ್ರಸನ್ನ ಪೂಜೆ ಹಾಗೂ ಕ್ಷೇತ್ರಪಾಲ ಬಿಂಬ ಪ್ರತಿಷ್ಠೆ, ಶ್ರೀ ಮಗೃಂತಾಯ ದೈವದ ಪ್ರತಿಷ್ಠೆ ನಡೆಸಲಾಯಿತು.
ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ದೇವರ ಪುಣ್ಯ ಕಾರ್ಯದಲ್ಲಿ ಭಾಗಿಯಾಗಿದರು.
Kshetra Samachara
17/02/2021 05:18 pm