ಉಡುಪಿ: ಕರಾವಳಿಯುದ್ದಕ್ಕೂ ಸಾಕಷ್ಟು ಐತಿಹಾಸಿಕ ಹಿನ್ನಲೆಗಳಿರುವ ದೈವ ದೇವಾಲಯಗಳು ಇಂದಿಗೂ ಕೂಡ ಸುಸ್ಥಿತಿಯಲ್ಲಿವೇ. ಇದೇ ಸಾಲಿಗೆ ಸೇರುವ ಹೊಸಂಗಡಿಯ ಮೆಟ್ಕಲ್ ಗುಡ್ಡೆಯಲ್ಲಿ ಮೇಲಿರುವ ದೇವಸ್ಥಾನವು ಸಾಕಷ್ಟು ಐತಿಹಾಸಿಕ ಹಿನ್ನಲೆ ಹೊಂದಿದೆ. ನಗರ ಸಂಸ್ಥಾನದ ಕಾವಲುಕೋಟೆಯಾಗಿದ್ದ ಮೆಟ್ಕಲ್ ಗುಡ್ಡೆಯಲ್ಲಿ ಇತ್ತೀಚೆಗೆ ಜಾತ್ರಾ ಸಂಭ್ರಮ ನಡೆಯಿತು.
ಉಡುಪಿ ಜಿಲ್ಲೆಯಲ್ಲಿ ಇಂದಿಗೂ ಕೂಡ ಐತಿಹಾಸಿಕ ಹಿನ್ನಲೆಯುಲ್ಲ ಸ್ಥಳಗಳು ಇಂದಿಗೂ ಕಾಣಸಿಗುತ್ತದೆ. ಮುಖ್ಯವಾಗಿ ಬಸ್ರೂರು, ಬಾರ್ಕೂರು ಪ್ರದೇಶವನ್ನು ಗಮನಿಸಿದರೆ ಇಂದಿಗೂ ಕೂಡ ರಾಜ ಮಹಾರಾಜರು ಆಳ್ವಿಕೆ ಮಾಡಿದ ಅಳಿದ ಉಳಿದ ಕುರುಹುಗಳು ಕಾಣ ಸಿಗುತ್ತದೆ. ಶಿವಮೊಗ್ಗ ಜಿಲ್ಲೆಯಲ್ಲಿ ಬಹು ಮುಖ್ಯ ಆಕರ್ಷಣಿಯ ಸ್ಥಳವಾಗಿರುವ ನಗರ ಕೋಟೆ ಶಿವಪ್ಪ ನಾಯಕನ ಕಥೆಯನ್ನು ಹೇಳುತ್ತದೆ. ಇದೇ ಶಿವಪ್ಪ ನಾಯಕ ನ ನಗರ ಸಂಸ್ಥಾನ ಪಶ್ಚಿಮ ದಿಕ್ಕಿನ ಕಾವಲು ಕೋಟೆ ಇಂದಿಗೂ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಹೊಸಂಗಡಿಯಲ್ಲಿ ನಾವು ನೋಡಬಹುದಾಗಿದೆ. ಜಿಲ್ಲೆಯ ಸಿದ್ಧಾಪುರ ಸಮೀಪದ ಈ ಹೊಸಂಗಡಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ಮೆಟ್ಕಲ್ ಗುಡ್ಡೆಯು ಇಂದಿಗೂ ನಗರ ಸಂಸ್ಥಾನದ ಕಾವಲು ಕೋಟೆಯ ಕಥೆ ಹೇಳುವುದರ ಜೊತೆಗೆ, ಅಲ್ಲಿ ಸ್ಥಿತನಾಗಿರುವ ಶ್ರೀ ಮಹಾಗಣಪತಿಯು ಭಕ್ತರ ಇಷ್ಟದ ಇಷ್ಟಾರ್ಥ ನೇರವೇರಿಸುವ ದೇವನಾಗಿ ಪ್ರಸಿದ್ಧನಾಗಿದ್ದಾನೆ. ಇಂದಿಗೂ ದೇವಸ್ಥಾನ ಸುತ್ತಲೂ ಇರುವ ಕಾವಲು ಕೋಟೆ ಐತಿಹಾಸಿಕ ಸ್ಥಳದ ಕುರಿತು ಆಸಕ್ತಿ ಮೂಡಿಸುತ್ತದೆ.
ಸಿದ್ಧಾಪುರ ಪೇಟೆಯಿಂದ ಹೊಸಂಗಡಿ ಮೂಲಕ ಸಾಗಿ ವರಾಹಿ ಜಲವಿದ್ಯುತ್ ಕೇಂದ್ರಕ್ಕೆ ತೆರಳುವ ದಾರಿಯಲ್ಲಿ ಸಾಗಿ ಬಂದರೆ ಎತ್ತರ ಗುಡ್ಡೆಯ ಮೇಲೆ ಈ ಮೆಟ್ಕಲ್ ಗುಡ್ಡೆ ಗಣಪತಿ ದೇವಸ್ಥಾನ ಕಾಣಸಿಗುತ್ತದೆ. ಸಾಕಷ್ಟು ಐತಿಹಾಸಿಕ ಹಿನ್ನಲೆ ಇದ್ದರು ಸ್ಥಳೀಯ ಜನರನ್ನು ಹೊರತುಪಡಿಸಿ ಹೊರಗಿನವರಿಗೆ ಮಾಹಿತಿ ಇಲ್ಲದ ಪ್ರದೇಶ ಸದ್ಯ ಜನರನ್ನು ತನ್ನತ್ತ ಆಕರ್ಷಿಸುತ್ತಿದೆ. ಐತಿಹಾಸಿಕವಾಗಿಯು ಮತ್ತು ದೇವರ ಕಾರಣೀಕತೆ ಮೂಲ ಹೆಸರುವಾಸಿಯಾದ ಕ್ಷೇತ್ರ ಸದ್ಯ ಜಾತ್ರಾ ಮಹೋತ್ಸವದ ಸಡಗರದಲ್ಲಿದೇ. ಮೆಟ್ಕಲ್ ಗುಡ್ಡೆಯ ಮೇಲಿರುವ ಗಣಪತಿ ದೇವಸ್ಥಾನದ ದರ್ಶನ ಪಡೆಯಲು ಕಾಡು ದಾರಿಯಲ್ಲಿ ನಡೆದು ಸಾಗಬೇಕು, ಕಚ್ಚಾ ರಸ್ತೆ ವ್ಯವಸ್ಥೆ ಇದ್ದರು ಕೂಡ ಜೀಪ್, ಬೈಕ್‌ಗಳ ಮೂಲಕ ಮಾತ್ರ ಮೇಲೇರಿ ಬರಲು ಸಾಧ್ಯವಾಗುವ ಹಿನ್ನಲೆಯಲ್ಲಿ ಚಾರಣ ಪ್ರಿಯರಿಗೆ ಈ ಬೆಟ್ಟ ಹೊಸ ಅನುಭವವನ್ನು ನೀಡುತ್ತಿದೆ. ವರ್ಷವು ಫೆಬ್ರವರಿ ತಿಂಗಳಿನಲ್ಲಿ ದೇವಸ್ಥಾನದಲ್ಲಿ ವರ್ಧಂತ್ಯುತ್ಸವ ನಡೆಯುತ್ತಿದ್ದು ಈ ಬಾರಿ ಬಹು ಸಂಖ್ಯೆಯಲ್ಲಿ ಭಕ್ತ ಗಣ ಆಗಮಿಸಿ ದೇವರ ದರ್ಶನ ಪಡೆದರು.
ಒಟ್ಟಾರೆಯಾಗಿ ಮೆಟ್ಕಲ್ ಗುಡ್ಡೆ ಐತಿಹಾಸಿಕ ದಾಖಲೆಗಳನ್ನು ಹಿಡಿದಿಟ್ಟುಕೊಂಡಿರುವ ಧಾರ್ಮಿಕ ಕ್ಷೇತ್ರವಾಗಿ ಬೆಳೆಯುತ್ತಿದೆ. ಇಲ್ಲಿನ ಮೂಲಕ ಸ್ವರೂಪಕ್ಕೆ ಧಕ್ಕೆ ಬರದ ಹಾಗೇ ಪ್ರವಾಸಿಗರನ್ನು ಸೆಳೆಯುವ ಅಭಿವೃದ್ಧಿ ಕಾರ್ಯ ನಡೆಸಿದರೆ ಉತ್ತಮ ಪ್ರವಾಸಿ ಕೇಂದ್ರವಾಗುದರಲ್ಲಿ ಎರಡು ಮಾತಿಲ್ಲ.
ಸಂದೇಶ್ ಶೆಟ್ಟಿ ಆಜ್ರಿ ಪಬ್ಲಿಕ್ ನೆಕ್ಸ್ಟ್ ಉಡುಪಿ
Kshetra Samachara
10/02/2021 04:55 pm