ಉಡುಪಿ: ಅಯೋಧ್ಯೆ ಭವ್ಯ ರಾಮ ಮಂದಿರ ನಿರ್ಮಾಣಕ್ಕಾಗಿ ದೇಶಾದ್ಯಂತ ವಿಶ್ವ ಹಿಂದೂ ಪರಿಷತ್ ನೇತೃತ್ವದಲ್ಲಿ ನಿಧಿ ಸಂಗ್ರಹ ಅಭಿಯಾನ ನಡೆಯುತ್ತಿದೆ. ಕಳೆದ ಜನವರಿ 15ರಿಂದ ಫೆಬ್ರವರಿ 27 ರ ತನಕ ದೇಶದ 29 ಸಾವಿರ ಹಳ್ಳಿಗಳಿಗೆ ಲಕ್ಷಾಂತರ ವಿಶ್ವ ಹಿಂದೂ ಪರಿಷತ್ ಕಾರ್ಯಕರ್ತರು ಭೇಟಿ ನೀಡಿ ಅಭಿಯಾನದಲ್ಲಿ ಕೈಜೋಡಿಸುತ್ತಿದ್ದಾರೆ. ಭಾರತ ದೇಶದಲ್ಲಿ ಮತ್ತೊಮ್ಮೆ ಹಿಂದೂಗಳ ಬಾಂಧವ್ಯ ಗಟ್ಟಿಯಾಗಬೇಕು ಮತ್ತೊಮ್ಮೆ ಹಿಂದೂರಾಷ್ಟ್ರ ಸದೃಢವಾಗಬೇಕು ಅನ್ನುವುದೇ ಇದರ ಮೂಲ ಮಂತ್ರವಾಗಿದೆ.
ಇಡೀ ದೇಶದಲ್ಲಿ ಜಾತಿ ಭೇದ ಪಂಗಡಗಳ ಬೇಧವಿಲ್ಲದೆ ಶ್ರೀರಾಮನ ಮಂದಿರಕ್ಕೆ ದೇಣಿಗೆ ನೀಡಲು ಮುಂದಾಗುತ್ತಿದ್ದಾರೆ ಹಾಗೂ ಪರಮಪೂಜ್ಯ ಪೇಜಾವರ ಶ್ರೀಪಾದಗಳರು ಶ್ರೀ ರಾಮಮಂದಿರ ಟ್ರಸ್ಟ್ ನಲ್ಲಿ ದಕ್ಷಿಣ ಭಾರತದ ಏಕೈಕ ಪ್ರತಿನಿಧಿಯಾಗಿದ್ದಾರೆ. ದಕ್ಷಿಣ ಭಾರತದ ಎಲ್ಲಾ ರಾಜ್ಯಗಳಿಗೆ ಶ್ರೀಗಳು ಭೇಟಿ ನೀಡಿ ಅಲ್ಲಿಯ ಕಾರ್ಯಕರ್ತರನ್ನು ಅಯೋಧ್ಯೆ ರಾಮಮಂದಿರ ನಿರ್ಮಾಣಕ್ಕೆ ನಿಧಿ ಸಂಗ್ರಹ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ.
ಆಯಾ ರಾಜ್ಯಗಳಿಗೆ ಭೇಟಿ ನೀಡಿ ಅಲ್ಲಿಯ ಭಾಷೆಯಿಂದಲೇ ಜನರಿಗೆ ಶ್ರೀರಾಮಮಂದಿರದ ನಿರ್ಮಾಣದ ಬಗ್ಗೆ ತಿಳಿ ಹೇಳುವ ಕೆಲಸ ಶ್ರೀಗಳು ಮಾಡುತ್ತಿದ್ದಾರೆ. ಇದರಿಂದ ಸನಾತನ ಹಿಂದೂ ಧರ್ಮದ ಬೇರು ಗಟ್ಟಿಯಾಗು ದರಲ್ಲಿ ಎರಡು ಮಾತಿಲ್ಲ ಎಂದು ಹಿಂದೂ ಬಾಂಧವರು ಅಭಿಪ್ರಾಯಪಟ್ಟಿದ್ದಾರೆ.
Kshetra Samachara
04/02/2021 03:08 pm