ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಇತಿಹಾಸ ಪ್ರಸಿದ್ಧ ಹೆಜಮಾಡಿ ಶ್ರೀ ಮಹಾಲಿಂಗೇಶ್ವರ ದೇವಳದ ಜೀರ್ಣೋದ್ಧಾರ

ಹೆಜಮಾಡಿ: ಇತಿಹಾಸ ಪ್ರಸಿದ್ಧ ೯೦೦ ವರ್ಷದ ಐತಿಹ್ಯ ಇರುವ ಹೆಜಮಾಡಿ ಶ್ರೀ ಮಹಾಲಿಂಗೇಶ್ವರ ದೇವಳವು ಜೀರ್ಣೋದ್ಧಾರಗೊಳ್ಳುತ್ತಿದ್ದು, ಫೆ. ೧೪ರಿಂದ ಫೆ ೧೮ರ ವರೆಗೆ ಸಾನಿಧ್ಯ ಕಲಶಾಭಿಷೇಕ ನಡೆಯಲಿದೆ ಎಂದು ದೇವಳದ ಆಡಳಿತ ಮೊಕ್ತೇಸರ ದಯಾನಂದ ಹೆಜ್ಮಾಡಿ ಹೇಳಿದ್ದಾರೆ.

ಅವರು ದೇವಳದಲ್ಲಿ ಮಾಧ್ಯಮದೊಂದಿಗೆ ಮಾತನಾಡಿ ಕಳೆದ ವರ್ಷ ಸಂಪೂರ್ಣ ಪುನಃನಿರ್ಮಾಣ ಮಾಡಬೇಕೆಂದು ಗ್ರಾಮದ ಜನರೆಲ್ಲರೂ ಆಶಿಸಿ, ದೇವಳದ ಜೀರ್ಣೋದ್ಧಾರ ಪ್ರಕ್ರಿಯೆಗೆ ಚಾಲನೆ ನೀಡಿದ್ದೇವೆ. ಸರಿಸುಮಾರು ೧೦ ಕೋಟಿ ರೂಪಾಯಿ ವೆಚ್ಚದಲ್ಲಿ ಜೀರ್ಣೋದ್ಧಾರ ಮಾಡುವ ಬಗ್ಗೆ ತೀರ್ಮಾನಿಸಿದ್ದೇವೆ. ಪುತ್ತಿಗೆ ಮಠಾಧೀಶ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿಯವರ ದಿವ್ಯ ಉಪಸ್ಥಿತಿಯಲ್ಲಿ ದೇವಳದ ತಂತ್ರಿಗಳಾದ ವೇದಮೂರ್ತಿ ರಾಧಾಕೃಷ್ಣ ತಂತ್ರಿಯವರ ನಿರ್ದೇಶನದಂತೆ ಕೆಲಸ ಕಾರ್ಯ ನಡೆಯುತ್ತಿದೆ. ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಜಯಂತ್ ಶೆಟ್ಟಿ ಪೂಣೆ ಹಾಗೂ ಸರ್ವ ಸದಸ್ಯರು ಸಂಪೂರ್ಣ ಸಹಕಾರ ನೀಡುತ್ತಿದ್ದಾರೆ.

ದೇವಳದ ಕೆಲಸಗಳನ್ನು ವಿಭಾಗಗಳಾಗಿ ಹಂಚಿ ನೀಡಿದ್ದರ ಫಲವಾಗಿ ಸಮಯಕ್ಕೆ ಸರಿಯಾಗಿ ಕೆಲಸ ನಡೆಯುತ್ತಿದೆ. ಫೆಬ್ರವರಿ ೧೪ರಿಂದ ಫೆ ೧೮ರ ವರೆಗೆ ಸಾನಿಧ್ಯ ಕಲಶಾಭಿಷೇಕ ಪ್ರಕ್ರಿಯೆ ನಡೆಯಲಿದೆ ಎಂದರು.

ಈ ಸಂದರ್ಭ ಜೀರ್ಣೋದ್ಧಾರ ಸಮಿತಿಯ ಜೊತೆಕಾರ್ಯದರ್ಶಿ ಪ್ರಭೋಧ್ ಹೆಜ್ಮಾಡಿ, ಸದಸ್ಯ ರವೀಂದ್ರ ಎನ್ ಕೋಟ್ಯಾನ್, ಪ್ರಧಾನ ಅರ್ಚಕ ಪದ್ಮಾನಾಭ ಭಟ್ ಮತ್ತಿತರರು ಉಪಸ್ಥರಿದ್ದರು.

Edited By : Manjunath H D
Kshetra Samachara

Kshetra Samachara

25/01/2021 04:09 pm

Cinque Terre

11.71 K

Cinque Terre

0

ಸಂಬಂಧಿತ ಸುದ್ದಿ