ಮುಲ್ಕಿ: ಮುಲ್ಕಿ ಶ್ರೀ ವೀರಮಾರುತಿ ದೇವಸ್ಥಾನದಲ್ಲಿ ಸಂಭ್ರಮದ ಪ್ರತಿಷ್ಠಾ ವರ್ಧಂತಿ ಉತ್ಸವ ಮಂಗಳವಾರ ನಡೆಯಿತು.
ಬೆಳಗ್ಗೆ 9.30ಕ್ಕೆ ದೇವತಾ ಪ್ರಾರ್ಥನೆಯೊಂದಿಗೆ ಶ್ರೀ ದೇವರಿಗೆ ಸೀಯಾಳ, ಪಂಚಾಮೃತ, ಭಾಗೀರಥಿ ಅಭಿಷೇಕ ನಡೆದು, ಮಧ್ಯಾಹ್ನ 12:30 ಕ್ಕೆ ಮಹಾ ನೈವೇದ್ಯ, ಮಂಗಳಾರತಿ, ಮಹಾ ಮಂತ್ರಾಕ್ಷತೆ, ಪ್ರಸಾದ ವಿತರಣೆ, ಭೂರಿ ಸಮಾರಾಧನೆ ನಡೆಯಿತು.
ಈ ಸಂದರ್ಭ ಅರ್ಚಕ ಅನಿಲ್ ಭಟ್ ಮಾತನಾಡಿ, ವಿಶ್ವಕ್ಕೆ ವಕ್ಕರಿಸಿರುವ ಕೊರೊನಾ ಮಹಾಮಾರಿ ದೂರವಾಗಿ ಆರೋಗ್ಯ, ಶಾಂತಿ ನೆಲೆಸಲಿ ಎಂದರು.
ಸಂಜೆ ಶ್ರೀ ದೇವರ ಗ್ರಾಮೋತ್ಸವ ಮುಲ್ಕಿಯ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ನಡೆದು, ಮಂಗಳಾರತಿ ಜರುಗಲಿದೆ. ಬಳಿಕ ವಾಪಸ್ ಶ್ರೀ ವೀರಮಾರುತಿ ದೇವಸ್ಥಾನಕ್ಕೆ ಬಂದು ವಿಶ್ರಾಂತಿ ಪೂಜೆ,
ನಿತ್ಯೋತ್ಸವ ಹಾಗೂ ವಸಂತ ಪೂಜೆ ನಡೆದು ದೇವರು ಸಿಂಹಾಸನಾರೂಢರಾಗಿ, ಹೂವಿನ ಪೂಜೆ ನಡೆಯಲಿದೆ ಎಂದರು.
ಈ ಸಂದರ್ಭ ದೇವಳದ ಭಜಕ ವೃಂದ, ಗ್ರಾಮಸ್ಥರು, ಭಕ್ತಾದಿಗಳು ಉಪಸ್ಥಿತರಿದ್ದರು.
Kshetra Samachara
29/12/2020 12:00 pm