ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ತುಳುನಾಡಿನ ವಿಶಿಷ್ಟ ಸಂಪ್ರದಾಯ, "ಕಂಚಿಲ್ದ ಪರಕೆ"

ವಿಶೇಷ ವರದಿ

ಉಡುಪಿ: ತುಳುನಾಡಿನಲ್ಲಿ "ಕಂಚಿಲ್ದ ಪರಕೆ" ಎನ್ನುವ ಸೇವೆ ತುಂಬಾ ವಿಶಿಷ್ಟ. ಮುದ್ದಾದ ಪುಟಾಣಿ ಮಕ್ಕಳು ಮದುಮಗ, ಮದುವಣಗಿತ್ತಿಯಂತೆ ಸಿಂಗಾರವಾಗಿ, ಹೆತ್ತವರು ತಮಗಾಗಿ ಹೇಳಿದ " ಕಂಚಿಲ್ದ ಪರಕೆ" ಎನ್ನುವ ಸೇವೆ ಈಗಲೂ ಕೆಲವೊಂದು ಕಡೆ ರೂಢಿಯಲ್ಲಿದೆ.

ಈ ದೃಶ್ಯವನ್ನು ಪಕ್ಕನೆ ನೋಡಿದಾಗ ಸ್ಟೇಜ್ ಪ್ರೊಗ್ರಾಮ್‌ಗೆ ಮಕ್ಕಳು ರೆಡಿ ಆಗಿದ್ದಾರೋ ಅನ್ನಿಸಿ ಬಿಡಬಹುದು. ಆದ್ರೆ ಈ‌‌ ಮಕ್ಕಳು ಈ ರೀತಿ ಸಿಂಗಾರಗೊಂಡದ್ದು, ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಅಲ್ಲ, ಬದಲಾಗಿ ಧಾರ್ಮಿಕ ಕಾರ್ಯಕ್ರಮಕ್ಕೆ.

ಉಡುಪಿ ಜಿಲ್ಲೆಯ ಕಲ್ಮಾಡಿಯ ಬ್ರಹ್ಮ ಬೈದೆರ್ಕಲ ದೈವಸ್ಥಾನದ ಕಾರಣಿಕದ ದೈವಗಳಿಗೆ ತಮ್ಮ ಹೆತ್ತವರು ಹೇಳಿಕೊಂಡ ಹರಕೆ ತೀರಿಸುವ ಸಲುವಾಗಿ.

ಹಲವು ಸಂಪ್ರದಾಯ, ಕಟ್ಟು ಪಾಡುಗಳು ರೂಢಿಯಲ್ಲಿರುವ ತುಳುನಾಡಿನಲ್ಲಿ ದೇವರಂತೆ ದೈವಗಳನ್ನು ಆರಾಧಿಸುತ್ತಾರೆ.ಇದೇ ರೀತಿಯಾಗಿ ಕಂಚಿಲ್ದ ಪರಕೆ ಎನ್ನುವುದು ಕೂಡ ಹಿಂದಿನಿಂದಲೂ ನಡೆದುಕೊಂಡು ಬಂದ, ದೈವಗಳಿಗೆ ನೀಡುವ ಹರಕೆ.

ಮಕ್ಕಳು ಆಗದೇ ಇದ್ದಾಗ, ಮಕ್ಕಳಿಗೆ ಅನಾರೋಗ್ಯ ಕಾಡಿದಾಗ ಅಥವಾ ಮಕ್ಕಳ ಒಳಿತಿಗಾಗಿ ಹೆತ್ತವರು ಈ ವಿಶೇಷ ಹರಕೆಯನ್ನು ಹೇಳುತ್ತಾರೆ. ಈ ಹರಕೆಯನ್ನು ಕೋಟಿ ಚೆನ್ನಯ್ಯ ಗರಡಿಯ ವಾರ್ಷಿಕ ನೇಮೋತ್ಸವದಂದ್ದು ಈಡೇರಿಸಲಾಗುತ್ತದೆ.

ಮಕ್ಕಳು ದೊಡ್ಡವರಾಗುವ ಮೊದಲು ಅಂದರೆ 12 ವರ್ಷ ತುಂಬುವ ಮೊದಲೇ ಇದನ್ನು ಹರಕೆ ಸಂದಾಯ ಮಾಡಬೇಕು ಎನ್ನುವ ನಿಯಮ ಇದೆ.

ಹರಕೆ ಹೊತ್ತ ಪೋಷಕರು, ಹುಡುಗನಾದರೇ ಮದುಮಗನ ರೀತಿಯಲ್ಲಿ, ಹುಡುಗಿ ಆದ್ರೆ ಮದುಗಳ ಹಾಗೆ ಸಿಂಗಾರ ಮಾಡಿ, ದೇವಸ್ಥಾನಕ್ಕೆ ಕರೆದುಕೊಂಡು ಬಂದು ಇಲ್ಲಿ ನಿಯಮಗಳಂತೆ ಹರಕೆ ಸಂದಾಯ ಮಾಡುತ್ತಾರೆ.

ಬಂದವರು ಈ ಮಕ್ಕಳಿಗೆ ಬಾಳೆಗೊನೆಯನ್ನು ಉಡುಗೊರೆಯಾಗಿ ನೀಡುತ್ತಾರೆ.ಭಕ್ತರು ತಮ್ಮ ಹಿರಿಯರು ನಡೆಸಿಕೊಂಡು ಬಂದ ಪದ್ದತಿಯನ್ನು ಈಗಲೂ ಮುಂದುವರಿಸಿಕೊಂಡು ಬರುತ್ತಿರುವುದು ವಿಶೇಷ.

Edited By : Manjunath H D
Kshetra Samachara

Kshetra Samachara

28/12/2020 12:51 pm

Cinque Terre

14.7 K

Cinque Terre

3

ಸಂಬಂಧಿತ ಸುದ್ದಿ