ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮುಲ್ಕಿ: ತೋಕೂರು ದೇವಳದಲ್ಲಿ ಪಂಚಮಿ ಉತ್ಸವ ಸಂಭ್ರಮ

ಮುಲ್ಕಿ: ಮುಲ್ಕಿ ಸಮೀಪದ ತೋಕೂರು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ವರ್ಷಾವಧಿ ಷಷ್ಠಿ ಮಹೋತ್ಸವದ ಅಂಗವಾಗಿ ಶನಿವಾರ ಪಂಚಮಿ ಉತ್ಸವ ಸರಳವಾಗಿ ನಡೆಯಿತು.

ಪಂಚಮಿ ಅಂಗವಾಗಿ ದೇವಳದಲ್ಲಿ ಶ್ರೀದೇವರ ಪಂಚಮಿ ಬಲಿ ಉತ್ಸವ, ಚಂದ್ರಮಂಡಲ ರಥೋತ್ಸವ,ಪಲ್ಲಕ್ಕಿ ಉತ್ಸವ, ಕೆರೆ ದೀಪೋತ್ಸವ, ಭೂತಬಲಿ ನಡೆಯಿತು.

ದೇವಳದ ತಂತ್ರಿಗಳಾದ ಶಿಬರೂರು ಗೋಪಾಲಕೃಷ್ಣ ತಂತ್ರಿ, ದೇವಳದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಹರಿದಾಸ್ ಭಟ್ ತೋಕೂರು,

ಅರ್ಚಕರಾದ ಮಧುಸೂದನ್ ಆಚಾರ, ಅನಂತ್ರಾಮ ಭಟ್, ಅಚ್ಚುತ ಭಟ್ ಪಾವಂಜೆ, ವಿನೋದ್ ಸಾಲ್ಯಾನ್ ಬೆಳ್ಳಾಯರು, ಧರ್ಮಾನಂದ ತೋಕೂರು, ದೇವಳದ ವ್ಯವಸ್ಥಾಪನಾ ಸಮಿತಿಯ ಇತರ ಸದಸ್ಯರು ಉಪಸ್ಥಿತರಿದ್ದರು.

Edited By : Manjunath H D
Kshetra Samachara

Kshetra Samachara

20/12/2020 10:07 am

Cinque Terre

20.31 K

Cinque Terre

0

ಸಂಬಂಧಿತ ಸುದ್ದಿ