ಮುಲ್ಕಿ: ಮುಲ್ಕಿ ಸಮೀಪದ ಪುನರೂರು ಶ್ರೀ ವಿಶ್ವನಾಥ ದೇವಸ್ಥಾನದಲ್ಲಿ ದೀಪೋತ್ಸವ ವಿಜ್ರಂಭಣೆಯಿಂದ ನಡೆಯಿತು. ಸೋಮವಾರ ಮಧ್ಯಾಹ್ನ ಮಹಾಪೂಜೆ ಬಳಿಕ ಅನ್ನಸಂತರ್ಪಣೆ ನಡೆಯಿತು.
ರಾತ್ರಿ ಶ್ರೀ ದೇವರಿಗೆ ದೀಪೋತ್ಸವ ರಂಗಪೂಜೆ, ಮಹಾಪೂಜೆ, ತುಳಸಿ ಸಂಕೀರ್ತನೆ ವಿಜ್ರಂಭಣೆಯಿಂದ ನಡೆಯಿತು. ಈ ಸಂದರ್ಭ ದೇವಳದ ಆಡಳಿತ ಮೊಕ್ತೇಸರ ಪಟೇಲ್ ವಾಸುದೇವರಾವ್ ಮಾತನಾಡಿ ಈ ಬಾರಿಯ ದೀಪೋತ್ಸವ ಕೊರೋನಾ ದಿಂದಾಗಿ ಸರಳ ರೀತಿಯಲ್ಲಿ ನಡೆದಿದ್ದು
ಇಡೀ ವಿಶ್ವವೇ ಕೊರೋನಾ ಮುಕ್ತವಾಗಲಿ ಎಂದು ದೇವರಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಮುಂದಿನ ದಿನಗಳಲ್ಲಿ ಶ್ರೀದೇವರ ಬ್ರಹ್ಮಕಲಶೋತ್ಸವ ನಡೆಯಲಿದ್ದು ಎಲ್ಲರ ಸಹಕಾರ ಅಗತ್ಯ ಎಂದು ವಿನಂತಿಸಿದರು.
ಈ ಸಂದರ್ಭ ಧರ್ಮದರ್ಶಿ ಹರಿಕೃಷ್ಣ ಪುನರೂರು, ಪುನರೂರು ಪ್ರತಿಷ್ಠಾನದ ಅಧ್ಯಕ್ಷ ದೇವಪ್ರಸಾದ್ ಪುನರೂರು, ವಿಶ್ವನಾಥ ರಾವ್, ಗೋಪಿನಾಥ ರಾವ್, ಪುನರೂರು ವಿಪ್ರ ಸಂಪದ ಅಧ್ಯಕ್ಷ ಜನಕರಾಜ ರಾವ್,ಉಷಾ ಹರಿಕೃಷ್ಣ ಪುನರೂರು,ಅರ್ಚಕ ಗುರುಮೂರ್ತಿ ಭಟ್ ಮಾಧವ ಶೆಟ್ಟಿಗಾರ್ ಕೆರೆಕಾಡು, ಸುರೇಶ್ ರಾವ್ ನೀರ ಳಿಕೆ ಸುಧಾಕರ್ ರಾವ್ ಪುನರೂರು, ರಾಘವೇಂದ್ರ ಭಟ್ ಕೆರೆಕಾಡು, ಕಾರ್ತಿಕ್, ಶಶಾಂಕ್, ಮತ್ತಿತರರು ಉಪಸ್ಥಿತರಿದ್ದರು
Kshetra Samachara
15/12/2020 08:20 am