ಮುಲ್ಕಿ: ಮುಲ್ಕಿ ಸಮೀಪದ ಪುನರೂರು ಶ್ರೀ ವಿಶ್ವನಾಥ ದೇವಸ್ಥಾನದಲ್ಲಿ ಕಾರ್ತಿಕ ಸೋಮವಾರದ ವಿಶೇಷ ಸಂದರ್ಭ ದೀಪೋತ್ಸವದ ದಿನದಂದು ಸಾಮೂಹಿಕ ಕಾರ್ತಿಕ ಸೋಮವಾರ ವ್ರತ ಉದ್ಯಾಪನ ಹೋಮ ಸಂಪನ್ನಗೊಂಡಿತು.
ವೇದಮೂರ್ತಿ ಗುರುಮೂರ್ತಿ ಭಟ್ ನೇತ್ರತ್ವದಲ್ಲಿ ವೇದಮೂರ್ತಿ ಅನಂತರಾಜ ಆಚಾರ್ ಹೆಜಮಾಡಿ ಹಾಗೂ ಜಿತೇಂದ್ರ ವಿ.ರಾವ್ ಹೆಜಮಾಡಿ ಇವರು ಹೋಮದ ವಿಧಿ-ವಿಧಾನ ನೆರವೇರಿಸಿದರು.
ದೇವಳದ ಅನುವಂಶಿಕ ಮೊಕ್ತೇಸರರಾದ ಪಟೇಲ್ ವಾಸುದೇವ ರಾವ್, ಪಟೇಲ್ ವಿಶ್ವನಾಥ ರಾವ್, ಪಟೇಲ್ ಗೋಪಿನಾಥ್ ರಾವ್, ಪುನರೂರು ಪ್ರತಿಷ್ಠಾನದ ಅಧ್ಯಕ್ಷರಾದ ದೇವಪ್ರಸಾದ್ ಪುನರೂರು, ಕಾರ್ತಿಕ ರಾವ್, ಸೂರಜ್ ರಾವ್, ಭಕ್ತಾದಿಗಳು ಉಪಸ್ಥಿತರಿದ್ದರು.
Kshetra Samachara
14/12/2020 07:57 pm