ಮಂಗಳೂರು:ದೇಶದಲ್ಲಿ ಕಾರ್ಯಚರಿಸುತ್ತಿರುವ ಮದ್ರಸಗಳ ಬಗ್ಗೆ ಭಯೋತ್ಪಾದನೆ ಉತ್ಪಾದಿಸುವ ಕೇಂದ್ರಗಳು ಎಂದು ವ್ಯಾಪಕ ಅಪಪ್ರಚಾರ ನಡೆಸಲಾಗುತ್ತಿದ್ದು ಇದರ ಹಿಂದೆ ಬಹುಸಂಖ್ಯಾತರ ಮತಗಳನ್ನು ಬಾಚುವ ಕುತ್ಸಿತ ರಾಜಕಾರಣ ಕೆಲಸ ಮಾಡುತ್ತಿದೆ.
ಇಂತಹ ಹಿಡನ್ ಅಜಂಡಾಗಳ ಮೂಲಕ ಮುಸ್ಲಿಮರನ್ನ ಕೆರಳಿಸಿ ಅವರನ್ನು ಬೀದಿಗಿಳಿಸುವ ಹುನ್ನಾರ ಅಡಗಿದೆ, ಕೋಮುವಾದಿಗಳ ಯಾವುದೇ ಷಡ್ಯಂತ್ರಕ್ಕೆ ಬಲಿಯಾಗದೇ , ಉದ್ವೇಗಕ್ಕೆ ಒಳಗಾಗದೇ ದೇಶದ ಸಮಗ್ರ ಕಾನೂನಿನ ಮೂಲಕ ಮತ್ತು ಸರಕಾರಗಳೊಂದಿಗೆ ಮಾತುಕತೆ ನಡೆಸುವ ಮೂಲಕ ಸಮಸ್ಯೆಗಳಿಗೆ ಪರಿಹಾರ ಕಂಡು ಕೊಳ್ಳಲು ಮುಸ್ಲಿಂ ಸಮಾಜ ಮುಂದೆ ಬರಬೇಕು ಎಂದು ಎಸ್ ಬಿ ದಾರಿಮಿ ಉಪ್ಪಿನಂಗಡಿ ಅಭಿಪ್ರಾಯ ಪಟ್ಟಿದ್ದಾರೆ.
ಅವರು ಜಿಲ್ಲಾ ಮದ್ರಸ ಮ್ಯಾನೇಜ್ಮೆಂಟ್ ಮಂಗಳೂರಿನ ಸಮಸ್ತ ಸಭಾಭವನದಲ್ಲಿ ಆಯೊಜಿಸಿದ "ಮಿಗವು" ಹಾಗೂ "ಮದ್ರಸ ವಿವಾದ ಸಮಾಲೋಚನೆ" ಕಾರ್ಯಕ್ರಮದಲ್ಲಿ ಮಾತನಾಡಿದರು. ಈ ಬಗ್ಗೆ ಮುಸ್ಲಿಂ ಮುಖಂಡರ ನಿಯೋಗವು ಮುಖ್ಯಮಂತ್ರಿ,ಶಿಕ್ಷಣ ಸಚಿವರ ಬಳಿ ತೆರಳಿ ತಪ್ಪು ಗ್ರಹಿಕೆಗಳನ್ನು ನೀಗಿಸಬೇಕಾಗಿದೆ ಎಂದು ಅವರು ಅಭಿಪ್ರಾಯ ಪಟ್ಟರು. ಸಮಾರಂಭದ ಅಧ್ಯಕ್ಷತೆಯನ್ನು ಜಿಲ್ಲಾ ಮದ್ರಸ ಮ್ಯಾನೆಜ್‌ಮೆಂಟ್ ಅಧ್ಯಕ್ಷ ಐ.ಮೊಹಿದಿನಬ್ಬ ಹಾಜಿ ವಹಿಸಿದ್ದರು. ಬೆಂಗಳೂರಿನ ಚಿಂತಕರಾದ ಯೂಸುಪ್ ಮಾಣಿ,
ಖ್ಯಾತ ಹೈಕೋರ್ಟ್ ವಕೀಲ ಲತೀಫ್ ಪುತ್ತೂರು,ವಕೀಲ ಸುಲೈಮಾನ್ ಸುರಿಬೈಲು, ವಕೀಲರಾದ ಸಿದ್ದೀಖ್ ಪುತ್ತೂರು , ದ.ಕ.ಜಿಲ್ಲಾ ಜಂಇಯ್ಯತ್ತುಲ್ ಮುಅಲ್ಲಿಮೀನ್ ಕಾರ್ಯದರ್ಶಿ ಮುಹಮ್ಮದ್ ಮುಸ್ಲಿಯಾರ್, ಮುಫತ್ತಿಷರಾದ ಅಬ್ದುಲ್ಲಾ ಫೈಝಿ,ಹನೀಫ್ ಮುಸ್ಲಿಯಾರ್ ಮುಸ್ಲಿಂ ಸೆಂಟ್ರಲ್ ಕಮಿಟಿಯ ಕಾರ್ಯದರ್ಶಿ ಹನೀಫ್ ಹಾಜಿ ಮಂಗಳೂರು,ಮುಪತ್ತಿಷ್ ಉಮರ್ ದಾರಿಮಿ,ಮೆಟ್ರೋ ಹಾಜಿ ಮಾತನಾಡಿದರು.
'ಸಮಸ್ತ' ದ ಮದ್ರಸ ಮ್ಯಾನೆಜ್‌ಮೆಂಟ್ ನ ಪ್ರತಿನಿಧಿ ಇಬ್ನು ಅದಂ ಕಣ್ಣೂರು ಮತ್ತು ಮೊಹಿದ್ದೀನ್ ಕೊಲ್ಲಂಪಾಡಿ ಅವರು 'ಮಿಗವ್ - 2022' ತರಗತಿ ನಡೆಸಿ ಕೊಟ್ಟರು. ಜಿಲ್ಲಾ ಮದ್ರಸ ಮ್ಯಾನೆಜ್‌ಮೆಂಟ್ ಪ್ರಧಾನ ಕಾರ್ಯದರ್ಶಿ ರಫೀಕ್ ಹಾಜಿ ನೇರಳಕಟ್ಟೆ ಸ್ವಾಗತಿಸಿದರು. ಇಬ್ರಾಹಿಂ ಕೋಣಾಜೆ ವಂದಿಸಿದರು. ಹಮೀದ್ ಕಣ್ಣೂರು ಕಾರ್ಯಕ್ರಮ ನಿರೂಪಿಸಿದರು.ಜಿಲ್ಲಾದ್ಯಂತ ಇರುವ ಇಪ್ಪತ್ತು ರೇಂಜ್ ಪ್ರತಿನಿಧಿಗಳು ಹಿರಿಯ ಗಣ್ಯರು ಭಾಗವಹಿಸಿದ್ದರು.
Kshetra Samachara
07/10/2022 04:38 pm