ಇಲ್ಲಿನ ರಾಜ್ಯ ಹೆದ್ದಾರಿ ಗಣಪತಿ ದೇವಸ್ಥಾನ ಮತ್ತು ಜುಮ್ಮಾ ಮಸೀದಿ ಬಳಿ ತೀವ್ರ ರಸ್ತೆ ಹದಗೆಟ್ಟಿದೆ. ಇದರಿಂದಾಗಿ ಕಳೆದ ಕೆಲವು ದಿನಗಳಿಂದ ಸ್ಥಳೀಯರು ಮತ್ತು ವಾಹನ ಸವಾರರು ಸಾಕಷ್ಟು ತೊಂದರೆ ಅನುಭವಿಸುವಂತಾಗಿದೆ. ಸಂಬಂಧಪಟ್ಟವರ ಗಮನಕ್ಕೆ ತಂದಿದ್ದರೂ ಯಾವುದೇ ಪ್ರಯೋಜನ ಆಗಿರಲಿಲ್ಲ. ಈ ಮಧ್ಯೆ ಸ್ಥಳೀಯ ಶಿಕ್ಷಕ ಅಲ್ವಿನ್ ದಾಂತಿ ಎಂಬವರು ರಸ್ತೆಯ ಛಾಯಾಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದರು. ಈ ಘಟನೆಯ ಬಳಿಕ ಎಚ್ಚೆತ್ತ ಸಾರ್ವಜನಿಕರು ಇಲಾಖೆಯ ವಿರುದ್ದ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದೀಗ ಬಂಟಕಲ್ಲು ನಾಗರಿಕ ಸೇವಾ ಸಮಿತಿಯ ಅಧ್ಯಕ್ಷ ರಾಮರಾಯ ಪಾಟ್ಕರ್ ಮತ್ತು ತಂಡದ ಸದಸ್ಯರು ಗುಂಡಿಗಳಿಗೆ ಜಲ್ಲಿ, ಕಾಂಕ್ರೀಟ್ ಹಾಕುವ ಮೂಲಕ ತಾತ್ಕಾಲಿಕ ತೇಪೆ ಹಾಕಿ ರಸ್ತೆ ಗುಂಡಿ ಮುಚ್ಚಿದ್ದಾರೆ.ಇವರ ಸೇವಾಕಾರ್ಯಕ್ಕೆ ಶಿರ್ವ ಗ್ರಾಮಸ್ಥರು ಮತ್ತು ಸ್ಥಳೀಯ ವಾಹನ ಚಾಲಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
PublicNext
19/09/2022 01:00 pm