ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಟೀಲು: ರಕ್ತದಾನ ಶಿಬಿರ

ಕಟೀಲು: ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಸರಸ್ವತಿ ಸದನದಲ್ಲಿ ಮಂಗಳೂರು ಕೆಎಂಸಿ ಆಸ್ಪತ್ರೆಯ ಸಹಯೋಗದಲ್ಲಿ ನಡೆದ ರಕ್ತದಾನ ಶಿಬಿರದಲ್ಲಿ 104 ಮಂದಿ ರಕ್ತದಾನ ಮಾಡಿದರು.

ಕಟೀಲು ಕಾಲೇಜು ರೆಡ್ ಕ್ರಾಸ್ ಅಲ್ಲದೆ ಪರಿಸರದ ಸಂಘ ಸಂಸ್ಥೆಗಳ ಸಹಕಾರದಲ್ಲಿ ನಡೆದ ರಕ್ತದಾನ ಶಿಬಿರದಲ್ಲಿ ಅರ್ಚಕ ಅನಂತಪದ್ಮನಾಭ ಆಸ್ರಣ್ಣ, ಶ್ರೀಹರಿನಾರಾಯಣದಾಸ ಆಸ್ರಣ್ಣ, ಮೋಹನ್ ರಾವ್, ಈಶ್ವರ ಕಟೀಲು, ಲೋಕಯ್ಯ ಸಾಲ್ಯಾನ್, ಯತೀಶ್ ಶೆಟ್ಟಿ ದೇವದಾಸ ಮಲ್ಯ, ನಿಶಾಂತ್ ಶೆಟ್ಟಿ, ಜನಾರ್ದನ ಕಿಲೆಂಜೂರು ದಾಮೋದರ ಶೆಟ್ಟಿ, ದೇವಿದಾಸ ಶೆಟ್ಟಿ, ರೆಡ್ ಕ್ರಾಸ್ ನ ಪರಮೇಶ್ವರ ಸಿಎಚ್ ಮುಂತಾದವರಿದ್ದರು. ಕಳೆದ ಹದಿನೈದು ವರುಷಗಳಿಂದ ನಡೆಯುತ್ತಿರುವ ರಕ್ತದಾನ ಶಿಬಿರದಲ್ಲಿ ದಾನಿಗಳಿಗೆ ದೇಗುಲದ ವತಿಯಿಂದ ಅಭಿನಂದನಾ ಪತ್ರ ನೀಡಲಾಯಿತು.

Edited By : PublicNext Desk
Kshetra Samachara

Kshetra Samachara

18/09/2022 04:21 pm

Cinque Terre

2.61 K

Cinque Terre

0

ಸಂಬಂಧಿತ ಸುದ್ದಿ