ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೈಂದೂರು: ಯೋಗ ಮತ್ತು ಪ್ರಾಣಾಯಾಮ ವಿದ್ಯಾರ್ಥಿಗಳಿಗೆ 10 ದಿನಗಳ ಕಾಲ: ಉಚಿತ ಶಿಬಿರ

ಬೈಂದೂರು :ಪ್ರಾಥಮಿಕ ಆರೋಗ್ಯ ಕೇಂದ್ರ ಮರವಂತೆ , ಆಯುಷ್ಮಾನ್ ಭಾರತ ಹಾಗೂ ಲಯನ್ಸ್ ಕ್ಲಬ್ ನಾವುಂದ ಇವರ ವತಿಯಿಂದ, ಜಿಲ್ಲಾ ಪಂಚಾಯತ್ ಉಡುಪಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ವಸತಿ ನಾವುಂದಲ್ಲಿ 10 ದಿನಗಳ ಕಾಲ ಉಚಿತವಾಗಿ ಮಕ್ಕಳ ‌ಯೋಗ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ.

ವಿದ್ಯಾರ್ಥಿಗಳಿಗೆ ಯೋಗ ಶಿಬಿರವನ್ನು ಅಧ್ಯಾಪಕರಾದ ನಾರಾಯಣ ದೇವಾಡಿಗ ಇವರ ಮಾರ್ಗದರ್ಶನದಲ್ಲಿ ತರಬೇತಿಯನ್ನು ನೀಡಲಾಗುತ್ತದೆ.ಈ ಶಿಬಿರದ ಉದ್ಘಾಟನೆಯನ್ನು ನರಸಿಂಹ ದೇವಾಡಿಗ ಲಯನ್ಸ್ ಕ್ಲಬ್ ವಲಯ ಅಧ್ಯಕ್ಷರು ನಾವುಂದ ಇವರು ಶಿಬಿರವನ್ನು ಉದ್ಘಾಟಿಸಿ ಯೋಗದ ಮಹತ್ವ ಮಕ್ಕಳಿಗೆ ತಿಳಿಸಿದರು.

ಈ ಸಂದರ್ಭದಲ್ಲಿ ಉದ್ಯಮಿ ಪ್ರದೀಪ್ ಶೆಟ್ಟಿ , ಕೆ ಸಮರ್ ಶೆಟ್ಟಿ ದಿನೇಶ್ ಆಚಾರ್ಯ, ಗ್ರಾಮ ಪಂಚಾಯತ್ ಸದಸ್ಯರಾದ ಪ್ರಮೋದ್ ಪೂಜಾರಿ ಮತ್ತಿತರು ಉಪಸ್ಥಿತರಿದ್ದರು.ಸುಬ್ರಹ್ಮಣ್ಯ ಸಂಸ್ಥೆಯ ಸಿಬ್ಬಂದಿಕಾರ್ಯಕ್ರಮದ ಸ್ವಾಗತ ಕಾರ್ಯಕ್ರಮವನ್ನು ನಿರ್ವಹಿಸಿದರು.

Edited By : PublicNext Desk
Kshetra Samachara

Kshetra Samachara

06/09/2022 08:00 pm

Cinque Terre

2.58 K

Cinque Terre

0

ಸಂಬಂಧಿತ ಸುದ್ದಿ