ಮೂಡುಬಿದಿರೆ: 2022-21ನೇ ಶೈಕ್ಷಣಿಕ ವರ್ಷದಲ್ಲಿ ನಡೆದ ಮಂಗಳೂರು ವಿಶ್ವವಿದ್ಯಾನಿಲಯದ ಅಂತಿಮ ಪರೀಕ್ಷೆಗಳ ರ‍್ಯಾಂಕ್‌ಪಟ್ಟಿ ಪ್ರಕಟಗೊಂಡಿದ್ದು, ಈ ಬಾರಿ ಒಟ್ಟು 26 ರ‍್ಯಾಂಕ್‌ಗಳನ್ನು ಗಳಿಸಿ ಮೂಡುಬಿದಿರೆಯ ಆಳ್ವಾಸ್ ಕಾಲೇಜು ಮಂಗಳೂರು ವಿಶ್ವವಿದ್ಯಾಲಯದಲ್ಲಿ ಅತೀ ಹೆಚ್ಚು ರ‍್ಯಾಂಕ್ ಗಳಿಸಿದ ಕಾಲೇಜು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ ಮೋಹನ್ ಆಳ್ವ ತಿಳಿಸಿದರು.
ಅವರು ಇಂದು ತಮ್ಮ ಕಛೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದರು. ಕಳೆದ 12 ವರ್ಷಗಳಿಂದ ಸರಾಸರಿ 25ಕ್ಕಿಂತಲೂ ಅಧಿಕ ರ‍್ಯಾಂಕ್‌ಗಳನ್ನು ಪಡೆಯುತ್ತಾ ವಿವಿ ಮಟ್ಟದಲ್ಲಿ ಅಗ್ರಗಣ್ಯ ಸ್ಥಾನದಲ್ಲಿದೆ. ಪದವಿ, ಸ್ನಾತಕೋತ್ತರ ಹಾಗೂ ಬಿಪಿಎಡ್ ವಿಭಾಗದಲ್ಲಿ ಒಟ್ಟು 11 ಪ್ರಥಮ ರ‍್ಯಾಂಕ್, ಪದವಿ ಹಾಗೂ ಬಿಪಿಎಡ್ ವಿಭಾಗದಲ್ಲಿ ೪ ದ್ವಿತೀಯ ರ‍್ಯಾಂಕ್, 5 ತೃತೀಯ ರ‍್ಯಾಂಕ್, 1 ಚತುರ್ಥ ರ‍್ಯಾಂಕ್, ಪದವಿ ಹಾಗೂ ಬಿ.ಎಡ್‌ನಲ್ಲಿ ಎರಡು 6ನೇ ರ‍್ಯಾಂಕ್, ಪದವಿ ವಿಭಾಗದಲ್ಲಿ ಎರಡು 8ನೇ ರ‍್ಯಾಂಕ್, ಒಂದು 10ನೇ ರ‍್ಯಾಂಕ್ ಗಳಿಸಿದೆ.
Kshetra Samachara
23/04/2022 08:56 am