ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಾಪುರ :ಅಕ್ರಮ ಮರಳುಗಾರಿಕೆ ಅಡ್ಡೆಗೆ ಗಣಿ ಅಧಿಕಾರಿಗಳಿಂದ ದಾಳಿ :ಅರು ದೋಣಿ ವಶಕ್ಕೆ

ಕುಂದಾಪುರ : ಉಡುಪಿ ಜಿಲ್ಲೆ ಕುಂದಾಪುರ ತಾಲೂಕಿನ ತ್ರಾಸಿ ಗ್ರಾಮದ ರಾಷ್ಟ್ರೀಯ ಹೆದ್ದಾರಿ 66ರ ಅರಮ ದೇವಸ್ಥಾನದ ಸಮೀಪದ ಸೌಪರ್ಣಿಕ ನದಿಯಲ್ಲಿ ಅನಧಿಕೃತ ಅಕ್ರಮ ಮರಳುಗಾರಿಕೆ ನಡೆಸುತ್ತಿದ್ದ ಸ್ಥಳಕ್ಕೆ ದಾಳಿ ನಡೆಸಿದ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿಗಳು ಅಕ್ರಮ ಮರಳುಗಾರಿಕೆಗೆ ಬಳಸುತ್ತಿದ್ದ 4 ದೋಣಿಗಳನ್ನು ಹಾಗೂ ಮರಳುಗಾರಿಕೆಗೆ ಬಳಸುತ್ತಿದ್ದ ಪರಿಕರಗಳನ್ನು ವಶಪಡಿಸಿಕೊಂಡಿದ್ದಾರೆ.

ಹಾಗೂ ಮೊವಾಡಿ ಬ್ರಿಡ್ಜ್ ಸಮೀಪವೂ ಅನಧಿಕೃತ ಮರಳು ಗಣಿಗಾರಿಕೆಗೆ ಬಳಸುತ್ತಿದ್ದ 2 ದೋಣಿ ಸೇರಿದಂತೆ ಒಟ್ಟು 6 ದೋಣಿಗಳನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ .

ಅಧಿಕಾರಿಗಳು ದಾಳಿ ನಡೆಸುತ್ತಾರೆ ಎಂಬ ಸುಳಿವು ಸಿಕ್ಕಿದ ತಕ್ಷಣ ಖದೀಮರು ಕ್ಷಣಮಾತ್ರದಲ್ಲಿ ಅಧಿಕಾರಿಗಳನ್ನು ಯಾಮಾರಿಸುತ್ತಿರುವುದು ಎಲ್ಲ ಕಡೆ ಸರ್ವಸಾಮಾನ್ಯ ಆದರೆ ಈ ಸಲ ದಕ್ಷ ಅಧಿಕಾರಿಗಳ ಚಾಣಾಕ್ಷವೇ ಬೇರೆಯಾಗಿತ್ತು.

ಹೌದು ನದಿಯ ಮೂಲಕ ದೋಣಿಯ ಮೇಲೇರಿ ಬಂದ ಅಧಿಕಾರಿ ! ತ್ರಾಸಿ, ಮೊವಾಡಿ, ಬೈಂದೂರು ತಾಲೂಕಿನ ನಾಡ ಗ್ರಾಮದ ಗುಡ್ಡೆಯಂಗಡಿಯ ಸುತ್ತಮುತ್ತ ಸೌಪರ್ಣಿಕ ನದಿಯಲ್ಲಿ ಅಕ್ರಮ ಮರಳುಗಾರಿಕೆ ಎಗ್ಗಿಲ್ಲದೆ ನಡೆಯುತ್ತಿದೆ ಎನ್ನುವ ದೂರಿನ ಮೇರೆಗೆ ಮಂಗಳವಾರ ದಾಳಿ ನಡೆಸಿದ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ದಕ್ಷ ಅಧಿಕಾರಿ ಸಂಧ್ಯಾ ಅವರು ಸ್ವತಃ ದೋಣಿಯ ಮೂಲಕ ತೆರಳಿ ದಾಳಿ ನಡೆಸಿದ್ದಾರೆ .

Edited By : PublicNext Desk
Kshetra Samachara

Kshetra Samachara

23/03/2022 03:32 pm

Cinque Terre

2.05 K

Cinque Terre

0

ಸಂಬಂಧಿತ ಸುದ್ದಿ