ಮೂಡುಬಿದಿರೆ: ಮಹಿಳಾ ದಿನಾಚರಣೆಯ ಅಂಗವಾಗಿ ಜೆಸಿಐ ಮೂಡುಬಿದಿರೆ ತ್ರಿಭುವನ್ ಇದರ ವತಿಯಿಂದ ಮೂಡುಬಿದಿರೆ ಪ್ರೆಸ್ ಕ್ಲಬ್‌ನಲ್ಲಿ ಮೂಡುಬಿದಿರೆ ತಾಲೂಕಿನಲ್ಲಿ ಕಳೆದ 17 ವರ್ಷಗಳಿಂದ ವರದಿಗಾರ್ತಿಯಾಗಿ ಸೇವೆ ಸಲ್ಲಿಸುತ್ತಿರುವ ಪ್ರೇಮಶ್ರೀ ಕಲ್ಲಬೆಟ್ಟು ಇವರಿಗೆ ಸನ್ಮಾನಿಸಲಾಯಿತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಮಾಧ್ಯಮ ಏನೆಂದು ತಿಳಿಯದ ಹೊತ್ತಿನಲ್ಲಿ ಮಾಧ್ಯಮ ಲೋಕಕ್ಕೆ ಕಾಲಿಟ್ಟೆ. ಹತ್ತನೇ ತರಗತಿಯ ಒಂದು ವರುಷದ ನಂತರ ಬೆಳ್ತಂಗಡಿಯ ವಾರಪತ್ರಿಕೆ" ಜೈ ಕನ್ನಡಮ್ಮ "ಪತ್ರಿಕೆಯ ವರದಿಗಾರಳಾಗಿ ಸೇರಿಕೊಳ್ಳುವ ಮೂಲಕ ಪತ್ರಿಕಾರಂಗಕ್ಕೆ ಪ್ರವೇಶಿಸಿ, ಎರಡು ವರುಷಗಳ ನಂತರ, ಮಾಧ್ಯಮದ ಕ್ಷೇತ್ರದ ಬಗ್ಗೆ ಅಲ್ಪ ಸ್ವಲ್ಪ ತಿಳಿದುಕೊಂಡೆ, ಮಾಧ್ಯಮ ಕ್ಷೇತ್ರದಲ್ಲಿ ಇನ್ನೂ ಸಾಕಷ್ಟು ಕಲಿಯಲಿದೆ ಎಂದು ಮೂಡುಬಿದಿರೆ ಕ್ಷೇತ್ರದ ಪತ್ರಕರ್ತೆ ಪ್ರೇಮಶ್ರೀ ಕಲ್ಲಬೆಟ್ಟು ತಿಳಿಸಿದರು.
ಈ ಸಂದರ್ಭದಲ್ಲಿ ಜೆಸಿಐ ಸಂಸ್ಥೆ ಮೂಡುಬಿದಿರೆಯ ಅಧ್ಯಕ್ಷೆ ಶಾಂತಲಾ ಆಚಾರ್ಯ, ಉಪಾಧ್ಯಕ್ಷೆ ಶಾಲಿನಿ , ಖಜಾಂಚಿ ಹಮೀದ್, ಜೆಸಿಐ ಸಂಸ್ಥೆಯ ಯೋಜನಾ ನಿರ್ದೇಶಕಿ ವರ್ಷಾ ಕಾಮತ್ , ಜೆಸಿಐ ಮಹಿಳಾ ಅಧ್ಯಕ್ಷೆ ಮಮತಾ ಸಚ್ಚಿದಾನಂದ, ವಲಯ 15ರ ಯುವ ಮತ್ತು ಕ್ರೀಡಾ ಸಂಯೋಜಕ ಸಂತೋಷ್, ಜೆಸಿಐ ಹಾಗೂ ಸಂಗೀತಾ, ವೀಣಾ, ಮತ್ತಿತರ ಪದಾಧಿಕಾರಿಗಳು ಉಪಸ್ಥಿತರಿದ್ದರು.
Kshetra Samachara
09/03/2022 06:16 pm