ಉಡುಪಿ: ಉಡುಪಿಯಲ್ಲಿ ಬಿಕ್ಷಾಟನೆ ಮಾಡಿ ಬದುಕು ಸಾಗಿಸುತ್ತಿದ್ದ ಯುವಕನನೊಬ್ಬ 12 ವರ್ಷಗಳ ಬಳಿಕ ಕುಂದಾಪುರ ತಾಲೂಕಿನ ವಕ್ವಾಡಿಯಲ್ಲಿರುವ ಮನೆಗೆ ಇಂದು ಸೇರಿದ್ದಾನೆ. ಕಾಣೆಯಾಗಿದ್ದ ಮಗ 12 ವರ್ಷಗಳ ಬಳಿಕ ಮನೆಗೆ ಬಂದಿರುವುದು ಹೆತ್ತಬ್ಬೆಯಲ್ಲಿ ಸಂತಸ ಮೂಡಿಸಿದ್ದು ಮಾತ್ರವಲ್ಲ, ಯುವಕನ ಮನೆಯಲ್ಲಿ ಅಕ್ಷರಶಃ ಹಬ್ಬದ ವಾತಾವರಣ ಕಂಡುಬಂತು.
ವಕ್ವಾಡಿ ತೆಂಕಬೆಟ್ಟು ಎಂಬಲ್ಲಿಯ ನಿವಾಸಿ ಪ್ರಶಾಂತ್ ಶೆಟ್ಟಿ (37 ) ಹೊಟ್ಟೆಪಾಡಿಗಾಗಿ ಶ್ರೀಕೃಷ್ಣ ಮಠಕ್ಕೆ ಬರುವ ಯಾತ್ರಿಕರಲ್ಲಿ ಭಿಕ್ಷೆ ಬೇಡುತ್ತಿದ್ದ. ರಾತ್ರಿಯ ವೇಳೆ ಬಸ್ಸು ನಿಲ್ದಾಣ, ಅಂಗಡಿ ಜಗುಲಿಯಲ್ಲಿ ಮಲಗಿ ದಿನ ಕಳೆಯುತ್ತಿದ್ದ.ಇದೀಗ ಜಿಲ್ಲಾ ನಾಗರಿಕ ಸಮಿತಿಯ ನೆರವಿನಿಂದ ಹನ್ನೆರಡು ವರ್ಷಗಳ ಬಳಿಕ ಹೆತ್ತಮ್ಮನ ಮಡಿಲು ಸೇರಿದ್ದಾನೆ.
Kshetra Samachara
28/07/2021 11:40 am