ಮುಲ್ಕಿ:ಭಾರತೀಯ ರೆಡ್ ಕ್ರಾಸ್ ಸೊಸೈಟಿ ಸ್ವಯಂ ಸೇವಾ ಘಟಕವಾಗಿ ಸಮುದಾಯದ ಆರೋಗ್ಯ ಮತ್ತು ಆರೈಕೆಯನ್ನು ಉತ್ತೇಜಿಸುತ್ತದೆ ಎಂದು ಮುಲ್ಕಿ ಸಮುದಾಯ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಕೃಷ್ಣ ಹೇಳಿದರು ಅವರು ರಕ್ತದಾನ ಶ್ರೇಷ್ಠ ದಾನವಾಗಿದ್ದು ಜನರಿಗೆ ತಿಳುವಳಿಕೆಯ ಅಗತ್ಯವಿದೆ ಎಂದರು.
ಮುಲ್ಕಿ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಜೂನಿಯರ್ ರೆಡ್ ಕ್ರಾಸ್ ಘಟಕ ಉದ್ಘಾಟಿಸಿ ಮಾತನಾಡಿದರು. ಕಾಲೇಜಿನ ಪ್ರಾಂಶುಪಾಲರಾದ ಡಾ.ವಾಸುದೇವ ಬೆಳ್ಳೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಹಿರಿಯ ಉಪನ್ಯಾಸಕಿಯಾದ ಡಾ. ರೇಖಾ ರೆಡ್ ಕ್ರಾಸ್ ಘಟಕ ದ ಸೇವಚಟುವಟಿಕೆಯ ಬಗ್ಗೆ ಮಾತನಾಡಿದರು.
ಕಾಲೇಜಿನ ಜೂನಿಯರ್ ರೆಡ್ ಕ್ರಾಸ್ ಘಟಕದ ಕೌನ್ಸಿಲರ್ ರಮಾನಂದ ಕೆ,ವಿದ್ಯಾರ್ಥಿಪ್ರತಿನಿಧಿಗಳಾದ ಪ್ರಣೀತ ಹಾಗೂ ರಾಕೇಶ್ ಶಿವಲಿಂಗ ರಾಜ್ ಮತ್ತಿತರರು ಉಪಸ್ಥಿತರಿದ್ದರು.
Kshetra Samachara
22/09/2022 09:53 pm